Ticker

6/recent/ticker-posts

Ad Code

ದಟ್ಟ ಮಂಜಿನ ಪರಿಣಾಮ ವಾಹನಗಳ ಸರಣಿ ಅಪಘಾತ : ನಾಲ್ವರು ಸಾವು

 

ನವದೆಹಲಿ: ಮಥುರಾದ ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ  ಇಂದು ಮುಂಜಾನೆ ದಟ್ಟವಾದ ಮಂಜಿನಿಂದಾಗಿ ಏಳು ಬಸ್‌ಗಳು ಮತ್ತು ಮೂರು ಕಾರುಗಳು ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು 25 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಂಜಿನಿಂದಾಗಿ ಸ್ಪಷ್ಟ ಗೋಚರತೆ ಇಲ್ಲದ ಕಾರಣ ವಾಹನಗಳು ಸರಣಿ ಅಪಘಾತದಲ್ಲಿ ಜಖಂಗೊಂಡವು. ಡಿಕ್ಕಿಯಾದ ರಭಸಕ್ಕೆ ಹಲವು ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಆಹುತಿಯಾಗಿದ್ದು ಸಾವು ನೋವು ಸಂಭವಿಸಿತ್ತು. ಪ್ರಯಾಣಿಕರಲ್ಲಿ ಭಯಭೀತ ವಾತಾವರಣ ಉಂಟಾಯಿತು. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಅಪಘಾತದ ಸ್ಥಳಕ್ಕೆ ಧಾವಿಸಿ  ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ನೀಡಿದರು. ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಆಡಳಿತದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲಿ ತೊಡಗಿವೆ.

Post a Comment

0 Comments