Ticker

6/recent/ticker-posts

Ad Code

ಕಾಸರಗೋಡಿನಲ್ಲಿ ಸೇನಾ ನೇಮಕಾತಿ ಪರಿಶೀಲನೆ : ಜನವರಿ 6 ರಿಂದ 12 ರವರೆಗೆ ಅವಕಾಶ


                                                             ಸಂಗ್ರಹಿತ ಚಿತ್ರ 

ಕಾಸರಗೋಡು: ಸೇನಾ ಉದ್ಯೋಗದ ಕನಸು ಕಾಣುವವರಿಗೆ ಕೇರಳದಲ್ಲಿ ವಿಶೇಷವಾಗಿ ಮಧ್ಯ ಮತ್ತು ದಕ್ಷಿಣ ಕೇರಳದಲ್ಲಿ ಸೇನಾ ಉದ್ಯೋಗ ಬಯಸುವವರಿಗೆ ತಮ್ಮ ಕನಸುಗಳನ್ನು ನನಸಾಗಿಸಲು  ಉತ್ತಮ ಅವಕಾಶ ಕಲ್ಪಿಸಲಾಗಿದೆ. ಸುಮಾರು ಒಂದು ವಾರ ಕಾಲ ಸೇನಾ ನೇಮಕಾತಿ ಪರಿಶೀಲನೆ ನಡೆಯಲಿದೆ. ಜನವರಿ 6 ರಿಂದ 12 ರವರೆಗೆ ಕಾಸರಗೋಡು ಸೇನಾ ನೇಮಕಾತಿ ಪರಿಶೀಲನೆ  ವಿದ್ಯಾನಗರ ಮುನ್ಸಿಪಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾಸರಗೋಡಿನಿಂದ ತ್ರಿಶೂರ್ ವರೆಗಿನ ಏಳು ಜಿಲ್ಲೆಗಳು ಮತ್ತು ಲಕ್ಷದ್ವೀಪ ಮತ್ತು ಮಾಹೆ ಕೇಂದ್ರಾಡಳಿತ ಪ್ರದೇಶಗಳಿಂದ 4500 ಅಭ್ಯರ್ಥಿಗಳು ಈ ಪರಿಶೀಲನಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಜನವರಿ 6 ರಂದು ಬೆಳಿಗ್ಗೆ 3 ಗಂಟೆಗೆ  ಆರಂಭವಾಗಲಿದೆ. ಆನ್‌ಲೈನ್ ಪರೀಕ್ಷೆಯಲ್ಲಿ ಆಯ್ಕೆಯಾದವರು ಪರಿಶೀಲನೆ ಕ್ಯಾಂಪ್ ನಲ್ಲಿ ಭಾಗವಹಿಸಲಿದ್ದಾರೆ. ಶಿಬಿರದ  ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಸಭೆಯನ್ನು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಸಲಾಗಿದೆ.

Post a Comment

0 Comments