ಉಡುಪಿ : ಉಡುಪಿಯ ನಿವಾಸಿ ಮೇಘಾ ಅವರ ವಿವಾಹ ಕೆನಡಾದಲ್ಲಿ ಉದ್ಯೋಗದಲ್ಲಿರುವ ಮಾಗಡಿ ತಾಲ್ಲೂಕಿನ ಸುಹಾಸ್.ಎಸ್ ಅವರ ಜತೆ ನಡೆಸಲು ಕುಟುಂಬಿಕರು ನಿರ್ಧರಿಸಿದ್ದರು. ಇದರಂತೆ ನಿಶ್ಚಿತಾರ್ಥಕ್ಕೆ ದಿನವನ್ನು ನಿಗದಿಪಡಿಸಲಾಗಿತ್ತು. ಉಡುಪಿಯ ಸರಸ್ವತಿ ಸಭಾಭವನದಲ್ಲಿ ನಿಶ್ಚಿತಾರ್ಥ ಮುಹೂರ್ತ ಫಿಕ್ಸ್ ಮಾಡಲಾಗಿದ್ದು ನೆಂಟರಿಷ್ಟರನ್ನು ಆಹ್ವಾನಿಸಲಾಗಿತ್ತು. ವಿದೇಶದಲ್ಲಿ ಉದ್ಯೋಗದಲ್ಲಿರುವ ಕಾರಣ ಕೊನೆಯ ಕ್ಷಣಕ್ಕೆ ವರ ತಲುಪವುದಾಗಿ ತಿಳಿಸಲಾಗಿತ್ತು. ಆದರೆ ನಿಶ್ಚಯಿಸಿದ ದಿನಕ್ಕೆ ರಜೆ ಸಿಗದ ಕಾರಣ ವರ ಹಾಜರಾಗುವುದು ಸಂಶಯವೆಂದಾಯಿತು. ಈ ವೇಳೆ ವಿಚಲಿತಗೊಳ್ಳದ ಮದುವೆ ಮನೆಯವರು ವರನನ್ನು ಆನ್ ಲೈನ್ ಮೂಲಕ ಸಂಪರ್ಕಿಸಿ ನಿಶ್ಚಯಿಸಿದ ಮುಹೂರ್ತಕ್ಕೆ ಅದೇ ಹಾಲ್ ನಲ್ಲಿ ನಿಶ್ಚಿತಾರ್ಥ ಕಾರ್ಯ ಮಾಡಿ ಮುಗಿಸಿದರು. ಬ್ರಾಹ್ಮಣ ಸಂಪ್ರದಾಯದಂತೆ ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಳಿಕ ನೆರೆದಿದ್ದ ಜನರಿಗೆ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

0 Comments