ಕಾಸರಗೋಡು: ಮನೆಯವರು ಚರ್ಚ್ಗೆ ಹೋಗಿದ್ದ ಸಂದರ್ಭದಲ್ಲಿ ದರೋಡೆ ನಡೆದ ಘಟನೆ ಕಾಞಂಗಾಡ್ ನಲ್ಲಿ ನಡೆದಿದೆ. ಮನೆಯಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ದಾಖಲೆಗಳನ್ನು ಕದ್ದಿದ್ದಾರೆ ಎಂದು ದೂರು ನೀಡಲಾಗಿದೆ. ಕಾಞಂಗಾಡ್ನ ಕುರುಂತೂರಿನ ಪಡನ್ನಕ್ಕಾಡ್ನಲ್ಲಿರುವ ಪಿ.ಕೆ. ಜೋಜಿ ಅವರ ಮನೆಯಲ್ಲಿ ಈ ರೀತಿ ದೋಚಲಾಗಿದೆ. ಬುಧವಾರ ಮಧ್ಯರಾತ್ರಿ 12 ಗಂಟೆಯಿಂದ ಗುರುವಾರ ಬೆಳಗಿನ ಜಾವ 2.30 ರ ನಡುವೆ ಈ ದರೋಡೆ ನಡೆದಿದೆ. ಮನೆಯ ಮುಂಭಾಗದ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು ಎರಡು ಪವನ್ ಚಿನ್ನ, ಒಂದು ಬೆಳ್ಳಿ ತಾಯಿತ ಮತ್ತು ಕಪಾಟಿನಲ್ಲಿ ಇರಿಸಲಾಗಿದ್ದ ಇತರ ದಾಖಲೆಗಳನ್ನು ಕದ್ದಿದ್ದಾರೆ ಎಂದು ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿದೆ. ಎಸ್ಐಸಿಪಿ ಜಿಜೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.

0 Comments