Ticker

6/recent/ticker-posts

Ad Code

ಸಾಯ ವಾರ್ಡ್ ಸದಸ್ಯೆ ಪ್ರಮೀಳಾರಿಗೆ ಆದಿವಾಸಿ ಕ್ಷೇಮ ಸಮಿತಿಯಿಂದ ಅಭಿನಂದನೆ


 ಪೆರ್ಲ :  ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಎಣ್ಮಕಜೆ ಗ್ರಾಮಪಂಚಾಯತ್ ನ ಮಹಿಳಾ ಮೀಸಲಾತಿ ವಾರ್ಡ್ ಸಾಯದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದ ಆದಿವಾಸಿ ವಿಭಾಗದ ಪ್ರಮೀಳಾ ಸಾಯ ಅವರನ್ನು ಆದಿವಾಸಿ ಕ್ಷೇಮ ಸಮಿತಿ  ಕುಂಬಳೆ ಏರಿಯಾ ಸಮಿತಿ ಸಭೆಯಲ್ಲಿ  ಅಭಿನಂದಿಸಲಾಯಿತು. ಎಕೆಎಸ್ ಕುಂಬಳೆ ಏರಿಯಾ ಕಮಿಟಿ ಅಧ್ಯಕ್ಷ ಚನಿಯಪ್ಪನಾಯ್ಕ ಕಾಟುಕುಕ್ಕೆ ಯವರ ಅಧ್ಯಕ್ಷತೆಯಲ್ಲಿ ಎಕೆಎಸ್ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಅಶೋಕನ್ ಕುನ್ನೂಚಿ, ಜಿಲ್ಲಾ ಖಜಾಂಚಿ ಪುಷ್ಪ  ಬೆದ್ರಂಪಳ್ಳ' ಕುಂಬಳೆ ಏರಿಯಾ ಕಾರ್ಯದರ್ಶಿ ಶಾರದಾ ಬದಿಯಡ್ಕ, ಏರಿಯಾ ಕಮಿಟಿ ಸದಸ್ಯರು, ಎಣ್ಮಕಜೆ, ಪುತ್ತಿಗೆ, ಬದಿಯಡ್ಕ, ಕುಂಬಳೆ ಪಂಚಾಯತ್ ಕಮಿಟಿಗಳ ಅಧ್ಯಕ್ಷರು,ಕಾರ್ಯದರ್ಶಿಗಳು ಭಾಗವಹಿಸಿದರು.

Post a Comment

0 Comments