ಮಾನ್ಯ : ಮಹಾರಾಷ್ಟ್ರದ ಸಂಗಮೀರ್ ನಲ್ಲಿರುವ ಧ್ರುವ ಗ್ಲೋಬಲ್ ಸ್ಕೂಲಿನಲ್ಲಿ ದಶಂಬರ್ 30 ರಿಂದ ಜನವರಿ 2 ರ ತನಕ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ದೆಗೆ ಕಲ್ಲಕಟ್ಟ ಶಾಲೆಯ ವಿದ್ಯಾರ್ಥಿನಿ ಅಪರ್ಣ ಪಾಣೂರು ಆಯ್ಕೆಯಾಗಿದ್ದಾಳೆ. ಪ್ರತಿಭಾನ್ವಿತೆಯಾದ ಈಕೆ ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಶಾಲಾ ವ್ಯವಸ್ಥಾಪಕರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ, ಪಿಟಿಎ ಹಾಗೂ ಯಂ ಪಿ ಟಿ ಎ ಸಮಿತಿ ಈಕೆಯನ್ನು ಅಭಿನಂದಿಸಿದೆ.

0 Comments