Ticker

6/recent/ticker-posts

Ad Code

ತೆಂಗಿನಕಾಯಿ ಹೆಕ್ಕಲು ಬಾವಿಗಿಳಿದ ವ್ಯಕ್ತಿ ಹಗ್ಗ ತುಂಡಾಗಿ ಬಾವಿಯೊಳಗೆ ಬಾಕಿ : ಅಗ್ನಿಶಾಮಕ ದಳದಿಂದ ರಕ್ಷಣೆ

 

ಕಾಸರಗೋಡು: ನುಳ್ಳಿಪಾಡಿಯಲ್ಲಿ ಬಾವಿಯೊಳಗೆ ಬಿದ್ದ  ತೆಂಗಿನ ಕಾಯಿಯನ್ನು ಹೆಕ್ಕಲು ಇಳಿದ ವ್ಯಕ್ತಿಯೊಬ್ಬ ಹಗ್ಗ ತುಂಡಾಗಿ ಗಂಟೆಗಳಷ್ಟು ಕಾಲ ನೀರಿದ್ದ ಬಾವಿಯೊಳಗೆ ಉಳಿದ ಪ್ರಕರಣ ವರದಿಯಾಗಿದೆ. ಇಲ್ಲಿನ  ರಾಜೇಂದ್ರನ್ ಅವರ ಮನೆ ಕಡೆಗೆ ವಾಲಿದ್ದ ತೆಂಗಿನ ಮರವನ್ನು ಎಳೆದು ಕಟ್ಟಲು ಬಂದಿದ್ದ ಮೂಲತಃ  ಕೋಝಿಕ್ಕೋಡ್ ನಿವಾಸಿ ಇದೀಗ ಈಗ ಕುಂಬಳೆಯಲ್ಲಿ  ವಾಸಿಸುವ ಶೇಬೀರ್ (39) ಎಂಬಾತನೇ ಈ ರೀತಿ ಬಾವಿಯೊಳಗೆ ಬಾಕಿಯಾದ ವ್ಯಕ್ತಿ. ಬಾವಿಗೆ ಬಿದ್ದ ತೆಂಗಿನಕಾಯಿಗಳನ್ನು   ಎತ್ತಿಕೊಂಡ ನಂತರ, ಮೇಲಕ್ಕೆ ಏರಲು ಪ್ರಯತ್ನಿಸುವಾಗ, ಪ್ಲಾಸ್ಟಿಕ್ ಹಗ್ಗ ಜಾರಿ ಬಾವಿಗೆ ಬಿದ್ದಿದ್ದಾನೆ. ತಕ್ಷಣ ಮನೆಯವರು  ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ರಕ್ಷಣಾ ಅಧಿಕಾರಿ ವಿ.ಎನ್. ವೇಣುಗೋಪಾಲ್ ನೇತೃತ್ವದ ತಂಡ ಆಗಮಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಮೇಲಕ್ಕೆತ್ತಲಾಯಿತು. ಅಗ್ನಿಶಾಮಕ ಅಧಿಕಾರಿ ವಿ.ಎಸ್. ಗೋಕುಲ್ ಕೃಷ್ಣನ್, ಚಾಲಕ ಕೆ.ಆರ್. ಅಜೇಶ್, ಅಗ್ನಿಶಾಮಕ ದಳದ ಎಸ್. ಸಿದ್ದೀಕ್, ಪಿ.ಎಂ. ನೌಫಲ್, ಗೃಹರಕ್ಷಕ ದಳದ ಎಸ್. ಸೋಬಿನ್ ಮತ್ತು ಪಿ.ವಿ. ಪ್ರಸಾದ್ ಸಹಕರಿಸಿದ್ದರು.

Post a Comment

0 Comments