Ticker

6/recent/ticker-posts

Ad Code

ಕುಂಬಳೆ ಟೋಲ್ ಪ್ಲಾಜಾ ವಿಷಯದಲ್ಲಿ ಜನಪ್ರತಿನಿಧಿಗಳ ಅವಗಣನೆ ಸುದ್ದಿ ವಾಸ್ತವಕ್ಕೆ ದೂರ : ಜಿಲ್ಲಾಧಿಕಾರಿ


 ಕುಂಬಳೆ :  ಆರಿಕ್ಕಾಡಿ ಟೋಲ್ ಪ್ಲಾಜಾಕ್ಕೆ ಸಂಬಂಧಿಸಿದ ಚರ್ಚೆಗೆ ಜಿಲ್ಲಾಧಿಕಾರಿಗಳ ಕೊಠಡಿಗೆ ಬಂದಿದ್ದ ಜನಪ್ರತಿನಿಧಿಗಳು ಅವಗಣಿಸಿರುವುದಾಗಿ   ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ  ಸುದ್ದಿ  ವಾಸ್ತವ ರಹಿತವಾದುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇಂಬಶೇಖರ್ ಸ್ಪಷ್ಟನೆ ನೀಡಿದ್ದಾರೆ.

. ಟೋಲ್ ಪ್ಲಾಜಾ ಸುಂಕ ವಸೂಲಾತಿ ವಿಷಯವು  ಹೈಕೋರ್ಟ್‌ನ ಪರಿಗಣನೆಯಲ್ಲಿದ್ದು   ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.  ಈ ಬಗ್ಗೆ ಡಿ.22ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ  ಅಧಿಕೃತ ಸಭೆ ನಡೆಸಿಲ್ಲ, ಆದರೆ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿಯನ್ನು ಕಾಣಲು ಬಂದ   ಜನಪ್ರತಿನಿಧಿಗಳಲ್ಲಿ  ಹಾಗೂ ರಾಜಕೀಯ ಪಕ್ಷದವರಲ್ಲಿ ತಿಳಿಸಲಾಗಿತ್ತು.   ಪ್ರಸ್ತುತ ಮಾಧ್ಯಮ ವರದಿಗಳು ಆಧಾರರಹಿತವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Post a Comment

0 Comments