ಕಾಸರಗೋಡು : ವಿಧಾನ ಸಭಾ ಚುನಾವಣೆಯ ಜಿಲ್ಲೆಯ ಭದ್ರತಾ ವ್ಯವಸ್ಥೆಗಳನ್ನು ಅವಲೋಕನಗೈಯಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಐಎಎಸ್ ಅಧ್ಯಕ್ಷತೆಯಲ್ಲಿ ಕಲೆಕ್ಟರೇಟ್ ಮಿನಿ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಿತು.
ಸಾಮಾನ್ಯ ಪರಿಶೀಲಕರು, ಪೊಲೀಸ್ ಪರಿಶೀಲಕರು, ಜಿಲ್ಲಾ ಪೊಲೀಸ್ ಮುಖ್ಯಸ್ಥರು, ಕೇಂದ್ರ ಸೇನಾ ಪ್ರತಿನಿಧಿಗಳು ಮತ್ತು ಇತರರು ಭಾಗವಹಿಸಿ ಅಭಿಪ್ರಾಯ ಮಂಡಿಸಿದರು. ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.

0 Comments