Ticker

6/recent/ticker-posts

Ad Code

ಮಾಜಿ ಸಚಿವ ಡಾ.ಎಂ.ಕೆ.ಮುನೀರ್, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇಂದು ಸಂಜೆ ಪೆರ್ಲಕ್ಕೆ

 

ಪೆರ್ಲ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಆಶ್ರಫ್ ಪರ ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು ಇಂದು ಸಂಜೆ ಯು.ಡಿ.ಎಫ್ ಎಣ್ಮಕಜೆ ಪಂಚಾಯತ್ ನೇತೃತ್ವದಲ್ಲಿ  ಬಹಿರಂಗ ಸಭೆ ಪೆರ್ಲ ಪೇಟೆಯಲ್ಲಿ ನಡೆಯಲಿದೆ. 

ಮಾಜಿ ಸಚಿವ ಡಾ.ಎಂ.ಕೆ.ಮುನೀರ್ ಹಾಗೂ  ಕರ್ನಾಟಕದ ಚಿಕ್ಕಬಳ್ಳಾಪುರದ ಜನಪ್ರಿಯ ಶಾಸಕ ಪ್ರದೀಪ್ ಈಶ್ವರ್  ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್, ಮು.ಲೀಗ್ ಹಾಗೂ ಸಹ ಸಂಘಟನೆಗಳ ಯುಡಿಎಫ್ ನೇತಾರರು  ಸಭೆಯಲ್ಲಿ ಪಾಲ್ಗೊಳಲಿದ್ದಾರೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments