Ticker

6/recent/ticker-posts

Ad Code

135 ಲೀಟರ್ ಗೋವಾ ಮದ್ಯದೊಂದಿಗೆ ಇಬ್ಬರ ಬಂಧನ

 

ಕಾಸರಗೋಡು : ಚುನಾವಣಾ ವಿಶೇಷ ಅಭಿಯಾನದ ಭಾಗವಾಗಿ ಅಬಕಾರಿ ಇಲಾಖೆ ನಡೆಸಿದ ತಪಾಸಣೆಯಲ್ಲಿ ಮದ್ಯ ಕಳ್ಳಸಾಗಾಟ ತಂಡವನ್ನು ಬಂಧಿಸಲಾಗಿದೆ. ಕಾರಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 135 ಲೀಟರ್ ಗೋವಾ ನಿರ್ಮಿತ ಮದ್ಯದೊಂದಿಗೆ  ದಕ್ಷಿಣ ಕನ್ನಡ ಜಿಲ್ಲೆಯ ಲತೇಶ್ ಪೂಜಾರಿ ಮತ್ತು ಬೆದ್ರಡ್ಕದ ಬಿ.ಪಿ. ಸುರೇಶ್ ಅವರನ್ನು ಕಾಸರಗೋಡು ಅಬಕಾರಿ ವಿಶೇಷ ದಳದ ಪ್ರಿವೆಂಟಿವ್ ಅಧಿಕಾರಿ ಕೆ.ವಿ. ರಂಜಿತ್ ಮತ್ತು ಅವರ ತಂಡ ಬಂಧಿಸಿದೆ. 

ಕರ್ನಾಟಕ ನೋಂದಣಿಯ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಮದ್ಯವನ್ನು ಕಾಞಂಗಾಡ್ ಮತ್ತು ಕಡಪ್ಪುರಂನಲ್ಲಿ ನಡೆಸಿದ ತಪಾಸಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಬಿ.ಪಿ ಸುರೇಶ್ ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಿಗೆ ಮದ್ಯ ಸರಬರಾಜು ಮಾಡುವ ಪ್ರಮುಖ ವ್ಯಕ್ತಿಯಾಗಿದ್ದು, ಈ ಹಿಂದಿನ ಅಬಕಾರಿ ಪ್ರಕರಣಗಳಲ್ಲಿಯೂ  ಆರೋಪಿಯಾಗಿದ್ದಾನೆ ಎಂದು ಅಬಕಾರಿ ಇಲಾಖೆ ತಿಳಿಸಿದೆ. ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ತಂಡದಲ್ಲಿ ನಾಗರಿಕ ಅಬಕಾರಿ ಅಧಿಕಾರಿಗಳಾದ ಟಿ ಪಿ ಅತುಲ್, ಪಿ ವಿ ಶಿಜಿತ್, ಪಿ ಶೈಲೇಶ್ ಕುಮಾರ್, ವಿ ಮಂಜುನಾಥ್  ಮತ್ತು ಮೋಹನ್ ಕುಮಾರ್ ಸೇರಿದ್ದಾರೆ.


                                                                            ಜಾಹೀರಾತು



Post a Comment

0 Comments