Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡಿನಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳ 16ನೇ ವಾರ್ಷಿಕೋತ್ಸವ ಆಚರಣೆ


ಕಾಸರಗೋಡು : ಕಾಸರಗೋಡು ಜಿಲ್ಲೆಯ ಸ್ಟುಡೆಂಟ್ ಪೊಲೀಸ್ ಕೆಡೆಟ್‌ಗಳ 16ನೇ ವಾರ್ಷಿಕೋತ್ಸವದ ಅಂಗವಾಗಿ ಓಣಂ ಶಿಬಿರದೊಂದಿಗೆ ಎಸ್‌ಪಿಸಿ ದಿನಾಚರಣೆ ನಡೆಸಲಾಯಿತು. ನಾಯನ್ಮಾರ್ಮೂಲ ಟಿಐಎಚ್‌ಎಸ್‌ಎಸ್‌ನಲ್ಲಿ ಐದು ಶಾಲೆಗಳ ಸುಮಾರು 450 ಕೆಡೆಟ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸೋಶಿಯಲ್ ಪೊಲೀಸ್ ಡೈರೆಕ್ಟರೇಟ್‌ನ ನಿರ್ದೇಶನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಸ್‌ಪಿಸಿ ದಿನಾಚರಣೆ ನಡೆಸುವ ನಿರ್ಧಾರದ ಭಾಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ಮುಖ್ಯಸ್ಥ ನಿತಿನ್ ರಾಜ್ ಪಿ. ಐಪಿಎಸ್ ಸಮಾರಂಭದ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಭಾಗವಹಿಸಿದ ಎಂಟು ಪ್ಲಾಟೂನ್‌ಗಳಿಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಸ್ಮರಣಿಕೆಗಳನ್ನು ವಿತರಿಸಿದರು.

ನಾಯನ್ಮಾರ್ಮೂಲ ಟಿಐಎಚ್‌ಎಸ್‌ಎಸ್, ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಸರಗೋಡು, ಸರ್ಕಾರಿ ಮುಸ್ಲಿಂ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆ ತಳಂಕರ, ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆ ಹಾಗೂ ಜಮಾಅತ್ ಹೈಯರ್ ಸೆಕೆಂಡರಿ ಶಾಲೆ ಚೆಮ್ಮನಾಡ್‌ನ ಕೆಡೆಟ್‌ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಸುಮಾರು 220 ಸೀನಿಯರ್ ಕೆಡೆಟ್‌ಗಳು ಭಾಗವಹಿಸಿದ ಸಮಾರಂಭದ ಪಥಸಂಚಲನದಲ್ಲಿ ಎಸ್‌ಎಂಎಸ್ ಡಿವೈಎಸ್‌ಪಿ ಉತ್ತಮ್‌ದಾಸ್, ಟಿಐಎಚ್‌ಎಸ್‌ಎಸ್ ಮ್ಯಾನೇಜರ್ ಅಬ್ದುಲ್ಲಾ ಕುಂಞಿ, ಮುಖ್ಯಶಿಕ್ಷಕ ಅನಿಲ್ ಕುಮಾರ್, ತಳಂಕರ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕಿ ಬಿಂದು ಹಾಗೂ ಚೆಮ್ಮನಾಡ್ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕ ವಿಜಯನ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಇಂಡಿಯಾ ಫೌಂಡೇಶನ್‌ನ ಕೌನ್ಸೆಲರ್‌ಗಳಾದ ಮೋಹನ್‌ದಾಸ್, ಅನಘ, ಅಕ್ಷಯ ಹಾಗೂ ದೇವಿಕಾ ತರಗತಿಗಳನ್ನು ನಡೆಸಿದರು. ಅನುರಾಗ್ ಮುಂಡಕ್ಕೈ, ನಿರ್ಮಲ್ ಕುಮಾರ್ ಕಾಡಕಂ ಹಾಗೂ ಸನಲ್ ಪಾಡಿಕ್ಕಾನಂ ವಿವಿಧ ವಿಷಯಗಳ ಕುರಿತು ತರಗತಿಗಳನ್ನು ನಡೆಸಿದರು. ಸೋಶಿಯಲ್ ಪೊಲೀಸ್ ಡಿವಿಷನ್ ಕೋಆರ್ಡಿನೇಟರ್ ರಾಮಕೃಷ್ಣನ್ ಚಾಲಿಂಗಾಲ್ ಹಾಗೂ ಜನಮೈತ್ರಿ ಎಡಿಎನ್‌ಒ ಶಶಿಧರನ್ ಮಾತನಾಡಿದರು. ಶಿಬಿರವು ಇಂದು ಸಮಾಪ್ತಿಗೊಳ್ಳಲಿದೆ.

Post a Comment

0 Comments

ಜಾಹೀರಾತು

Responsive Advertisement