Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನೇಜಿ ನಾಟಿಯ ಮಾಹಿತಿ ಪಡೆದ ಬಿ.ಇ.ಎಂ ಶಾಲೆಯ ಮಕ್ಕಳು

ಕಾಸರಗೋಡು :  ನಗರದ ಬಿ.ಇ.ಎಂ.ಎಚ್.ಎಸ್.ಎಸ್ ಶಾಲೆಯ ವಿದ್ಯಾರಂಗ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ವಿದ್ಯಾರ್ಥಿಗಳು ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಮೀಪವಿರುವ ಮೋಹಿನಿ ರಾವ್ ಅವರ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ನಾಟಿ ಉತ್ಸವ ಜರಗಿತು.

ಪ್ರಾರಂಭದಲ್ಲಿ ಮೋಹಿನಿ ರಾವ್ ಅವರು ಭತ್ತದ ಕೃಷಿಯ ಹಂತ-ಹಂತದ ಬಗ್ಗೆ, ಕೂಡ್ಲು ಮನೆತನ, ಸಂಪಿಗೆ ಚಾವಡಿ ಹಾಗೂ ಪುರಾತನ ಪದ್ಧತಿಯ ಸಂಕ್ಷಿಪ್ತ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. 

ಶಾಲೆಯ ಎಸ್.ಎಂ.ಸಿ. ಚಯರ್‌ಮ್ಯಾನ್ ಕೂಡ್ಲು ಮನೆತನದ ನಿಕಟವರ್ತಿ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕಿಯರಾದ  ರೋಹಿತಾಕ್ಷಿ ಟೀಚರ್,  ರಕ್ಷಿತಾ ಟೀಚರ್,  ಸೌಮ್ಯ ಟೀಚರ್ ಸಂರಕ್ಷಕರಾಗಿ ಜೊತೆಗಿದ್ದರು. ಮೋಹಿನಿ ರಾವ್ ಅವರನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಗರಸಭಾ ಸದಸ್ಯರೂ ಆದ ಹರೀಶ್ ಕೆ.ಆರ್ ಶಾಲು ಹೊಡಿಸಿ ಆಶೀರ್ವಾದ ಪಡಕೊಂಡರು. ಕಾರ್ಯಕ್ರಮದಲ್ಲಿ ಗಾಯಕ  ವಸಂತ ಬಾರಡ್ಕ ಅವರು ಕೃಷಿ ಪ್ರಧಾನ ಹಾಡನ್ನು ಹಾಡಿ ಮಕ್ಕಳ ಮನರಂಜಿಸಿದರು, ಸ್ಥಳೀಯ ನಿವಾಸಿ ತುಳಸಿ ಅವರು ನೇಜಿ ನಡುವಲ್ಲಿ ಭಾಗಿಯಾದರು.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement