Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಯಕ್ಷಗಾನ ಕಲಾವಿದ ಜಯೇಂದ್ರ ಕುಲಾಲ್ ಕಿದೂರು ಆತ್ಮಹತ್ಯೆಗೆ ಶರಣು


ಕುಂಬಳೆ :  ಖ್ಯಾತ ಯಕ್ಷಗಾನ ಕಲಾವಿದ ಕಿದೂರು ದಂಡೆಗೋಳಿ ನಿವಾಸಿ ಜಯೇಂದ್ರ ಕುಲಾಲ್ (54) ಆತ್ಮಹತ್ಯೆಗೈದಿರುವುದಾಗಿ ವರದಿಯಾಗಿದೆ. ಸೋಮವಾರ  ಸಂಜೆ 6 ಗಂಟೆಯ ವೇಳೆಗೆ ಮನೆಯೊಳಗೆ ಮೃತದೇಹ ಪತ್ತೆಯಾಗಿದ್ದು ಕುಂಬಳೆ ಪೋಲಿಸರು  ಅಸಹಜ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ತೆಂಕುತಿಟ್ಟಿನ ಖ್ಯಾತನಾಮ ಕಲಾವಿದರಲ್ಲಿ ರ್ವರಾಗಿದ್ದ ಜಯೇಂದ್ರ ಕುಲಾಲ್ ಈ ಹಿಂದೆ ಮೇಳಗಳಲ್ಲಿ ತಿರುಗಾಟ ನಡೆಸುತ್ತಿದ್ದರು. ತುಳು ಯಕ್ಷಗಾನ ಪ್ರಸಂಗದ ಕಥಾನಾಯಕ ಹಾಗೂ ಖಳ ನಾಯಕನ ಪಾತ್ರಗಳನ್ನು ಜನ ಮೆಚ್ಚುಗೆಯ ರೀತಿಯಲ್ಲಿ ನಿರ್ವಹಿಸುತ್ತಿದ್ದರು.  ಕೊರೋನ ಕಾಲಘಟ್ಟದ ಬಳಿಕ ಮನೆಯಲ್ಲಿ ಉಳಿದಿದ್ದ ಇವರು ಯಕ್ಷಗಾನ ಬಿಟ್ಟು ಬಳಿಕ ಸಾರಣೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಆರ್ಥಿಕವಾಗಿ ತೀವ್ರ ಸಂಕಷ್ಟವನ್ನನುಭವಿಸಿದ್ದು ಆತ್ಮಹತ್ಯೆಗೂ ಇದೇ ಕಾರಣವಾಗಿರಬೇಕೆಂದು ಶಂಕಿಸಲಾಗಿದೆ. 
ಮೃತರು ಪತ್ನಿಯರಾದ ಪ್ರೇಮ, ಪದ್ಮಾವತಿ, ಮಕ್ಕಳಾದ ವಿದ್ಯಾಶ್ರೀ, ಅಶ್ವಿನಿ, ಅಕ್ಷಿತ, ಅರ್ಚಿನಿ, ಪಂಚಮಿ.
ಅಳಿಯಂದಿರಾದ  ಸದಾಶಿವ, ಪ್ರವೀಣ್, ಗೋಪಾಲ ಎಂಬಿವರನ್ನಗಲಿದ್ದಾರೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement