Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

'ದುಬೈ ನಮ್ಮವರು' ವಿಶ್ವಕರ್ಮ ಸಮಿತಿ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆ

ಶಾರ್ಜಾ : ದುಬೈ ನಮ್ಮವರು ವಿಶ್ವಕರ್ಮ ಸಮಿತಿಯ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆ ಶಾರ್ಜಾದಲ್ಲಿ ಸಂಭ್ರಮದಿಂದ ನಡೆಯಿತು.

ವರುಣ್ ಆಚಾರ್ಯ ಬಜಕೂಡ್ಲು ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಸಂಘಟಕರು, ಸದಸ್ಯರು, ಕುಟುಂಬಸ್ಥರು ಹಾಗೂ ಪ್ರವಾಸಿ ಊರಿನ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಓಣಂ ಸದ್ಯ, ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ಆಟೋಟ ಸ್ಪರ್ಧೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಸಮಿತಿಯ ಅಧ್ಯಕ್ಷ ಮಿಥುನ್ ಆಚಾರ್ಯ ಕುಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ವರುಣ್ ಆಚಾರ್ಯ ಬಜಕೂಡ್ಲು, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ ಮೂವಾಜೆ, ಕಾರ್ಯದರ್ಶಿ ಮಹೇಶ್ ಆಚಾರ್ಯ ಕಲ್ಪಾರೆ ಹಾಗೂ ಖಜಾಂಜಿ ಜ್ಞಾನೇಶ್ ಆಚಾರ್ಯ ಮಾಯಿಪ್ಪಾಡಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸತ್ಯನಾರಾಯಣ ಆಚಾರ್ಯ ಎಡನೀರು ಕಾರ್ಯಕ್ರಮ ನಿರೂಪಿಸಿದರು. ಸದಸ್ಯರು ಹಾಗೂ ಕುಟುಂಬಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಾರ್ಷಿಕೋತ್ಸವ ಮತ್ತು ಓಣಂ ಆಚರಣೆ ಆತ್ಮೀಯತೆ, ಸ್ನೇಹ ಹಾಗೂ ಒಗ್ಗಟ್ಟಿನ ಸಂಭ್ರಮಕ್ಕೆ ಸಾಕ್ಷಿಯಾಯಿತು.

Post a Comment

0 Comments

ಜಾಹೀರಾತು

Responsive Advertisement