Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಕ್ಕಳ ಸಂರಕ್ಷಣಾ ಕೇಂದ್ರಗಳ ಓಣಂ ಆಚರಣೆಗೆ ಸರ್ಕಾರದಿಂದ 2 ಲಕ್ಷ ರೂ. ಅನುದಾನ

ತಿರುವನಂತಪುರ :  ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮಕ್ಕಳ ಸಂರಕ್ಷಣಾ ಕೇಂದ್ರಗಳಲ್ಲಿ ಓಣಂ ಆಚರಿಸಲು ಸರ್ಕಾರ ವಿಶೇಷವಾಗಿ 2 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಮನವಿಯ ಮೇರೆಗೆ ಮುಖ್ಯಮಂತ್ರಿ ಅವರ ನಿರ್ದೇಶನದಂತೆ ಕೇರಳ ಫೈನಾನ್ಷಿಯಲ್ ಕಾರ್ಪೊರೇಷನ್ ಈ ಮೊತ್ತವನ್ನು ಮಂಜೂರು ಮಾಡಿದೆ.

ರಾಜ್ಯದ 16 ಮಕ್ಕಳ ಸಂರಕ್ಷಣಾ ಕೇಂದ್ರಗಳಲ್ಲಿರುವ ಸುಮಾರು 250 ಮಕ್ಕಳಿಗಾಗಿ ಈ ಅನುದಾನವನ್ನು ಬಳಸಲಾಗುತ್ತದೆ. ಮಕ್ಕಳಿಗೆ ವಿಶೇಷ ಓಣಂ ಸದ್ಯ, ಪ್ರವಾಸ ಹಾಗೂ ಸಿನಿಮಾ ವೀಕ್ಷಣೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು.

Post a Comment

0 Comments

ಜಾಹೀರಾತು

Responsive Advertisement