Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆ. 09 ರಿಂದ ಪಚ್ಚಂಬಳ ಗಾರ್ಡನ್ ಸಿಟಿ ಆಡಿಟೋರಿಯಂನಲ್ಲಿ ಹಲಸು ಹಣ್ಣಿನ ಮೇಳ

ಉಪ್ಪಳ : ಮಂಜೇಶ್ವರದಲ್ಲಿ ಇತ್ತೀಚೆಗೆ ನಡೆದ ಹಲಸು ಹಣ್ಣಿನ ಮೇಳದ ಯಶಸ್ವಿಯ ಬಳಿಕ ಮತ್ತೊಮ್ಮೆ ಕಾಸರಗೋಡು ಜಿಲ್ಲೆಯ ಜನತೆಯ ಅಪೇಕ್ಷೆ ಮೇರೆಗೆ ಈ ವರ್ಷದ ಕೊನೆಯ ಹಲಸಿನ ಹಣ್ಣಿನ ಮೇಳ ಆಗಸ್ಟ್ 09 ರಿಂದ ಜುಲೈ 11 ರ ತನಕ ಮೂರು ದಿನಗಳ ಕಾಲ ಬಂದ್ಯೋಡ್ ಬಳಿಯ ಪಚ್ಚಂಬಳ ಗಾರ್ಡನ್ ಸಿಟಿ ಆಡಿಟೋರಿಯಂನಲ್ಲಿ ಜರುಗಲಿದೆ. ಬೆನಕ ಇವೆಂಟ್ಸ್ ಕುಂದಾಪುರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಮೇಳದಲ್ಲಿ ಹಲಸಿನ ಹಣ್ಣುಗಳು ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮಾವು ಮತ್ತು ಹಲಸಿನ ಹೋಳಿಗೆ, ಹಲಸಿನ ಜಿಲೇಬಿ, ಹಲಸಿನ ಅಪ್ಪ, ಕಬಾಬ್, ಮಂಚೂರಿ ಹಾಗೂ ಹಲಸಿನ ಬಿರಿಯಾನಿ ಸ್ಥಳದಲ್ಲೇ ಸಿದ್ಧಪಡಿಸಿ ಗ್ರಾಹಕರಿಗೆ ನೀಡಲಾಗುತ್ತದೆ. ಬೆಂಗಳೂರು ರಾಮನಗರದ ವಿಶೇಷ ಹತ್ತು ಬಗೆಯ ಮಾವಿನ ಹಣ್ಣುಗಳು, ತುಮಕೂರು ಮತ್ತು ಪಾಂಡಿಚೇರಿಯ ಚಂದ್ರ ಹಲಸು ಸೇರಿದಂತೆ ವಿವಿಧ ತಳಿಯ ಹಣ್ಣುಗಳು, ಹಲಸಿನ ಹಪ್ಪಳ, ಚಿಪ್ಸ್, ಜಾಮ್, ಉಪ್ಪಿನಕಾಯಿ, ಹಲಸಿನ ಹಣ್ಣಿನ ಐಸ್‌ಕ್ರೀಮ್ ಹಾಗೂ ಅಪ್ಪೆಮಿಡಿ ಚಟ್ನಿ ಸೇರಿದಂತೆ ಹಲವು ಬಗೆಯ ಮೌಲ್ಯವರ್ಧಿತ ಉತ್ಪನ್ನಗಳು ಮೇಳದಲ್ಲಿ ಇರಲಿವೆ. ಇಳಕಲ್ ಮತ್ತು ಮೈಸೂರು ಸಿಲ್ಕ್ ಸೀರೆಗಳು, ಚೆನ್ನಪಟ್ಟಣದ ಬೊಂಬೆಗಳು, ಮಣ್ಣಿನ ಆಭರಣಗಳು, ಬೇಲೂರಿನ ಶಿಲಾಮೂರ್ತಿಗಳು ಹಾಗೂ ಆಯುರ್ವೇದಿಕ್ ಉತ್ಪನ್ನಗಳು ಲಭ್ಯವಿದೆ. ಆಸಕ್ತರಿಗೆ ವಿವಿಧ ತಳಿಯ ಹಣ್ಣಿನ ಗಿಡಗಳು, ತರಕಾರಿ ಬೀಜಗಳು ಹಾಗೂ ಹೂವಿನ ಗಿಡಗಳು ಇಲ್ಲಿ ದೊರೆಯಲಿವೆ. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ರೇಷ್ಮೆ ಸೀರೆಗಳನ್ನು (ಜರಿ ಇರುವಂಥದ್ದು) ಇಲ್ಲಿ ನೀಡಿ ಹಣವನ್ನು ಪಡೆಯಬಹುದಾಗಿದೆ. ಅಲ್ಲದೇ ಮೇಳದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಹಲಸಿನ ಹಣ್ಣಿನ ಒಂದು ಜಿಲೇಬಿ ಉಚಿತವಾಗಿ ನೀಡಲಾಗುವುದು. ಮತ್ತು ಸೆಲ್ಫಿ ಸ್ಟ್ಯಾಂಡ್ ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಆಕಿದ ಪ್ರತಿಯೊಬ್ಬರಿಗೆ "ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್" ಸಾಬೂನು ಉಚಿತವಾಗಿ ದೊರೆಯಲಿದೆ. ಮೇಳವು ಬೆಳಿಗ್ಗೆ 10  ಗಂಟೆಯಿಂದ ರಾತ್ರಿ 9.30 ಗಂಟೆಯವರೆಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬಂದ್ಯೋಡ್ ಬಳಿಯ ಪಚ್ಚಂಬಳದಲ್ಲಿ ಪ್ರಥಮ ಬಾರಿಯಾಗಿ ಈ ವರ್ಷದ ಕೊನೆಯ ಹಲಸುಮೇಳದ ಯಶಸ್ವಿಗೆ ಸಹಕರಿಸಬೇಕೆಂದು  ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement