Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸೆ. 6ರಂದು ‘ಕರಾಡವಾಣಿ’ ರಜತ ಮಹೋತ್ಸವ; ಸದಸ್ಯರ ಬೃಹತ್ ಸಮಾವೇಶ

ಪೆರ್ಲ : ‘ಕರಾಡವಾಣಿ’ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ ಪತ್ರಿಕೆಯ ಸಂರಕ್ಷಕರು, ಚಂದಾದಾರರು ಹಾಗೂ ಜಾಹಿರಾತುದಾರರ ಬೃಹತ್ ಸದಸ್ಯರ ಸಮಾವೇಶವು ಸೆಪ್ಟೆಂಬರ್ 6ರಂದು ಪೆರ್ಲದ ಭಾರತಿ ಸದನದಲ್ಲಿ ನಡೆಯಲಿದೆ.

ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾವೇಶ ನಡೆಯಲಿದ್ದು, ಉದ್ಘಾಟನಾ ಸಮಾರಂಭ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ‘ಉದಯವಾಣಿ’ ದಿನಪತ್ರಿಕೆಯ ನಿವೃತ್ತ ಉಪಸಂಪಾದಕ ನಿತ್ಯಾನಂದ ಸಜಂಗದ್ದೆ ಸಮಾವೇಶವನ್ನು ಉದ್ಘಾಟಿಸಿ, ವಿಶೇಷ ಸಂವಾದ ನಡೆಸಲಿದ್ದಾರೆ.

ಪತ್ರಿಕೆ ಕಳೆದ 25 ವರ್ಷಗಳಲ್ಲಿ ಬೆಳೆದು ಬಂದ ಹಾದಿಯನ್ನು ಪರಿಚಯಿಸುವ ‘ಕರಾಡವಾಣಿ ಕಥಾ ಕಥನ’ ಕಾರ್ಯಕ್ರಮವನ್ನು ಸಂಪಾದಕ ಮಂಡಳಿ ನಡೆಸಲಿದೆ. ಮಧ್ಯಾಹ್ನದ ಭೋಜನದ ಬಳಿಕ ಓದುಗರು, ಸದಸ್ಯರು ಹಾಗೂ ಸಂಪಾದಕ ಮಂಡಳಿಯವರ ನಡುವೆ ಮುಕ್ತ ವಿಚಾರ ವಿನಿಮಯ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ, ಕರಾಡವಾಣಿಯ 25 ವರ್ಷದ ಇತಿಹಾಸದಲ್ಲಿ ಪ್ರಕಟವಾದ ಅತ್ಯಂತ ಹಳೆಯ ಸಂಚಿಕೆಯನ್ನು ಸಮಾವೇಶಕ್ಕೆ ತರುವ ಸದಸ್ಯರಿಗೆ ವಿಶೇಷ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ.

ಈ ಐತಿಹಾಸಿಕ ರಜತ ಮಹೋತ್ಸವದಲ್ಲಿ ಕರಾಡವಾಣಿಯ ಮಹಾ ಸಂರಕ್ಷಕರು, ವಿಶೇಷ ಸಂರಕ್ಷಕರು, ಸಂರಕ್ಷಕರು, ಆಜೀವ ಹಾಗೂ ವಾರ್ಷಿಕ ಚಂದಾದಾರರು, ಪತ್ರಿಕೆಯ ಹಿತೈಷಿ ಜಾಹಿರಾತುದಾರರು ಹಾಗೂ ಸಂಪಾದಕ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪತ್ರಿಕೆಯ ಉಪಸಂಪಾದಕರೂ ಸಮಾವೇಶದ ಸಂಯೋಜಕರೂ ಆದ ಎಸ್.ಎನ್. ಭಟ್ ಸೈಪಂಗಲ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement