Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆಕ್ರಮಣಕಾರಿ ಬೀದಿ ನಾಯಿಗಳನ್ನು ಕೊಲ್ಲಲು ಮಾರ್ಗಸೂಚಿ ಪ್ರಕಟಿಸಿದ ಕೇರಳ ಸರ್ಕಾರ

ತಿರುವನಂತಪುರ : ನಿಯಮಗಳು ಹಾಗೂ ಕಟ್ಟುನಿಟ್ಟಿನ ಷರತ್ತುಗಳಿಗೆ ಒಳಪಟ್ಟು ಆಕ್ರಮಣಕಾರಿ ಬೀದಿ ನಾಯಿಗಳನ್ನು ದಯಾಮರಣಗೊಳಿಸಲು ಅವಕಾಶ ನೀಡುವ ಮಾರ್ಗಸೂಚಿಯನ್ನು ಕೇರಳ ಸರ್ಕಾರ ಪ್ರಕಟಿಸಿದೆ.

ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಮಾರ್ಗಸೂಚಿಯ ಪ್ರಕಾರ, ಆಕ್ರಮಣಕಾರಿ ಸ್ವಭಾವದ ನಾಯಿಗಳು, ರೇಬಿಸ್ ಸೋಂಕಿಗೆ ಒಳಗಾದ ನಾಯಿಗಳು, ಗಂಭೀರವಾಗಿ ಗಾಯಗೊಂಡಿರುವ ಹಾಗೂ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ನಾಯಿಗಳನ್ನು ದಯಾಮರಣಗೊಳಿಸಬಹುದು.

ನಾಯಿಗಳಿಗೆ ದಯಾಮರಣ ನೀಡುವ ಪ್ರಕ್ರಿಯೆಯನ್ನು ಪಶುವೈದ್ಯಕೀಯ ಶಸ್ತ್ರಚಿಕಿತ್ಸಕರೇ ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಮಟ್ಟದಲ್ಲಿ ವಿಶೇಷ ಸಮಿತಿಯನ್ನು ರಚಿಸಬೇಕು.

ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಸಮಿತಿಯ ಅಧ್ಯಕ್ಷರಾಗಿದ್ದು, ಕಾರ್ಯದರ್ಶಿ ಸಂಚಾಲಕರಾಗಿರುತ್ತಾರೆ. ವಾರ್ಡ್ ಸದಸ್ಯ, ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ, ವೈದ್ಯಾಧಿಕಾರಿ, ಎಬಿಸಿ ಕೇಂದ್ರದ ಯೋಜನಾ ಉಸ್ತುವಾರಿ ಹಾಗೂ ಅನಿಮಲ್ ವೆಲ್ಫೇರ್ ಬೋರ್ಡ್ ಸದಸ್ಯರು ಸಮಿತಿಯಲ್ಲಿರುತ್ತಾರೆ.

ನಾಯಿಗಳನ್ನು ಯಾವುದೇ ಯಂತ್ರದ ಮೂಲಕ ಕೊಲ್ಲುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದಯಾಮರಣಕ್ಕಾಗಿ ಸೋಡಿಯಂ ಪೆಂಟೋಬಾರ್ಬಿಟಲ್ ಅಥವಾ ಥಯೋಪೆಂಟಲ್ ಸೋಡಿಯಂ ಔಷಧಿಗಳನ್ನು ಮಾತ್ರ ಇಂಜೆಕ್ಷನ್ ಮೂಲಕ ಬಳಸಬೇಕು.

ದಯಾಮರಣಕ್ಕೆ ಒಳಪಡಿಸಬೇಕಾದ ನಾಯಿಗಳನ್ನು ಮೊದಲು ಹಿಡಿದು ಮೂರು ದಿನಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು. ಆ ಅವಧಿಯಲ್ಲಿ ಯಾರಾದರೂ ನಾಯಿಯನ್ನು ದತ್ತು ಪಡೆಯಲು ಅಥವಾ ಆರೈಕೆಗೆ ತೆಗೆದುಕೊಳ್ಳಲು ಸಿದ್ಧರಿದ್ದಾರೆಯೇ ಎಂಬುದನ್ನು ಪರಿಶೀಲಿಸಿದ ಬಳಿಕವೇ ದಯಾಮರಣದ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Post a Comment

0 Comments

ಜಾಹೀರಾತು

Responsive Advertisement