ಮುಳ್ಳೇರಿಯ : ಓಣಂ ಹಬ್ಬದ ಸಂಭ್ರಮದಿಂದ ನಡೆಯುತ್ತಿದ್ದಂತೆ ಮುಳ್ಳೇರಿಯ ಪೇಟೆಯಲ್ಲಿ ಹಬ್ಬದ ವ್ಯಾಪಾರ ಜೋರಾಗಿದೆ. ವಿಶೇಷವಾಗಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿರುವ ಹೂವಿನ ವ್ಯಾಪಾರಿಗಳಿಂದ ಪೇಟೆಯಲ್ಲಿ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
ಓಣಂ ಆಚರಣೆಯ ಪ್ರಮುಖ ಆಕರ್ಷಣೆಯಾಗಿರುವ ಪೂಕಳಂ(ಹೂವಿನ ರಂಗೋಲಿ) ಸಿದ್ಧಪಡಿಸಲು ವಿವಿಧ ಬಗೆಯ ಹೂಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಮುಳ್ಳೇರಿಯ ಪೇಟೆಯ ಪ್ರಮುಖ ರಸ್ತೆ ಬದಿಗಳಲ್ಲಿ ಬಣ್ಣ ಬಣ್ಣದ ಹೂವುಗಳ ರಾಶಿ ಕಂಡುಬರುತ್ತಿದ್ದು, ಪೇಟೆಯ ವಾತಾವರಣವೇ ಹಬ್ಬದ ಸಂಭ್ರಮದಿಂದ ಕಳೆಗಟ್ಟಿದೆ.
ಕರ್ನಾಟಕದಿಂದ ಬಂದಿರುವ ವ್ಯಾಪಾರಿಗಳು ವಿವಿಧ ಬಗೆಯ ಹೂವುಗಳನ್ನು ವಾಹನಗಳಲ್ಲಿ ತಂದು ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಗುಲಾಬಿ, ಚೆಂಡುಹೂವು ಸೇರಿದಂತೆ ವಿವಿಧ ಬಣ್ಣ ಹಾಗೂ ವೈವಿಧ್ಯಮಯ ಹೂವುಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಓಣಂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೂವಿನ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಪೇಟೆ ಗ್ರಾಹಕರಿಂದ ತುಂಬಿ ತುಳುಕುತ್ತಿದೆ.
ಮನೆಗಳು, ಅಂಗಡಿಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಓಣಂ ಆಚರಣೆಗೆ ಸಿದ್ಧತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೂವುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗ್ಗೆಯಿಂದಲೇ ಹೂವಿನ ಮಳಿಗೆಗಳತ್ತ ಗ್ರಾಹಕರು ಆಗಮಿಸಿ ತಮಗೆ ಬೇಕಾದ ಹೂವುಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಓಣಂ ಹಬ್ಬದ ಹಿನ್ನೆಲೆಯಲ್ಲಿ ಮುಳ್ಳೇರಿಯಾ ಪೇಟೆಯಲ್ಲಿ ಹೂವಿನ ವ್ಯಾಪಾರದ ಜತೆಗೆ ಹಬ್ಬಕ್ಕೆ ಅಗತ್ಯವಿರುವ ಇತರ ಸಾಮಗ್ರಿಗಳ ವ್ಯಾಪಾರವೂ ಚುರುಕುಗೊಂಡಿದೆ. ಹಬ್ಬದ ಖರೀದಿಗಾಗಿ ಗ್ರಾಮೀಣ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೇಟೆಗೆ ಆಗಮಿಸುತ್ತಿರುವುದರಿಂದ ವ್ಯಾಪಾರ ವಹಿವಾಟಿನಲ್ಲಿ ಚೈತನ್ಯ ಮೂಡಿದೆ.
ಒಟ್ಟಿನಲ್ಲಿ, ಕರ್ನಾಟಕದಿಂದ ಆಗಮಿಸಿರುವ ಹೂವಿನ ವ್ಯಾಪಾರಿಗಳ ಸಾನ್ನಿಧ್ಯ ಹಾಗೂ ಗ್ರಾಹಕರ ಭರಾಟೆಯ ವಾತಾವರಣ ದಿನದಿಂದ ದಿನಕ್ಕೆ ಮತ್ತಷ್ಟು ರಂಗೇರಿತ್ತು.
ಚಿತ್ರಗಳು : ವಿಷ್ಣುಪ್ರಕಾಶ್ ಮುಳ್ಳೇರಿಯ


.jpeg)
.jpeg)
0 Comments