ಉಪ್ಪಳ : ಬಿಎಸ್ಎಸ್ ಅಕಾಡೆಮಿ ಉಪ್ಪಳ ಹಾಗೂ ಎಕ್ಸ್ಪರ್ಟ್ ಕನ್ಸಲ್ಟೆನ್ಸಿ ಮತ್ತು ಸರ್ವಿಸಸ್, ಉಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಓಣಂ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಬಿಎಸ್ಎಸ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕರ್ಷಕ ಹೂವಿನ ರಂಗೋಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಓಣಂ ಸದ್ಯ ಹಾಗೂ ವಿವಿಧ ಮನರಂಜನಾ ಸ್ಪರ್ಧೆಗಳು ಗಮನ ಸೆಳೆದವು.
ಬಿಎಸ್ಎಸ್ ನ ಸಾಯಿ ರಾಧಾಕೃಷ್ಣ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ರಜಾಕ್ ಮಾಸ್ಟರ್ ಉಪಸ್ಥಿತರಿದ್ದರು. ಸಂಸ್ಥೆಯ ತಾಹಿರ, ಪವಿತ್ರ, ಕೈರುನ್ನೀಸಾ, ರುಕ್ಸಾನಾ ಮೊದಲಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಭಾಗ್ಯನಾರಾಯಣ್ ಸ್ವಾಗತಿಸಿ, ಮುಬೀನಾ ವಂದಿಸಿದರು. ಸಂಸ್ಥೆಯ ಮಹಿಳಾ ಸಿಬ್ಬಂದಿ ಹಾಗೂ ಸದಸ್ಯರು ಪ್ರದರ್ಶಿಸಿದ ತಿರುವಾದಿರ ನೃತ್ಯ ಎಲ್ಲರ ಗಮನ ಸೆಳೆಯಿತು.

0 Comments