ಕಾಞಂಗಾಡ್ : ಬೀದಿ ನಾಯಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟಿರುವ ಘಟನೆ ಕಾಞಂಗಾಡ್‌ನಲ್ಲಿ ನಡೆದಿದೆ. ಮಡಿಕೈ ಕೀಕ್ಕಾನ್‌ಕೋಟೆಯ ಎಂ.ಎಸ್. ಮೋಹನನ್ (58) ಮೃತರು. ಅಪಘಾತದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ಕಾಞಂಗಾಡ್ ಅಲಾಮಿಪಳ್ಳಿ ಸ್ಟ್ಯಾಂಡ್‌ನ ಚಾಲಕರಾಗಿದ್ದ ಮೋಹನನ್ ಭಾನುವಾರ ಸಂಜೆ ಅಲಾಮಿಪಳ್ಳಿಯಿಂದ ಪ್ರಯಾಣಿಕರನ್ನು ಕರೆದೊಯ್ದು ಕಾಞಂಗಾಡ್ ಗೆ ತೆರಳುತ್ತಿದ್ದರು. ಪುದಿಯಕೋಟ ಇಂಡಿಯನ್ ಕಾಫಿ ಹೌಸ್ ಮುಂಭಾಗದಲ್ಲಿ ಬೀದಿ ನಾಯಿ ಏಕಾಏಕಿ ಅಡ್ಡ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಆಟೋ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಮೋಹನನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಲೀಲಾ, ಮಕ್ಕಳಾದ ಅಜಯ್, ಅನುರಾಗ್ ಹಾಗೂ ಸೊಸೆ ನಿಮಿಷ ಅವರನ್ನು ಅಗಲಿದ್ದಾರೆ.

0 Comments