Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆನೆಗುಂದಿ ಶ್ರೀಗಳ ಭೇಟಿಯಾಗಿ ಧಾರ್ಮಿಕ-ಸಾಮಾಜಿಕ ಸಮಾಲೋಚನೆ ನಡೆಸಿದ ವಿ.ಹಿಂ.ಪ. ಅಂತರರಾಷ್ಟ್ರೀಯ ಅಧ್ಯಕ್ಷ

ಪಡುಕುತ್ಯಾರು : ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಜೀ ಅವರು ನಿನ್ನೆ ರಾತ್ರಿ ಉಡುಪಿ ಜಿಲ್ಲೆಯ ಪಡುಕುತ್ಯಾರು-ಕಟಪಾಡಿಯಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಕ್ಕೆ ಆಗಮಿಸಿದರು.

ಇಂದು ಮುಂಜಾನೆ ಪರಮಪೂಜ್ಯ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಪಟ್ಟದ ದೇವರ ಶ್ರೀಕರ ಅರ್ಚಿತ ಪೂಜಾ ಸೇವೆ ನಡೆಯುವ ಸಂದರ್ಭದಲ್ಲಿ ಅವರು ಭಕ್ತಿಭಾವದಿಂದ ಪಾಲ್ಗೊಂಡರು. ಬಳಿಕ ಜಗದ್ಗುರುಗಳವರೊಂದಿಗೆ ಹಿಂದೂ ಸಮಾಜದ ಸಮಕಾಲೀನ ವಿಚಾರಗಳು, ಸಂಘಟನೆ ಹಾಗೂ ಧಾರ್ಮಿಕ-ಸಾಮಾಜಿಕ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ  ಶರಣ್ ಪಂಪ್‌ವೆಲ್, ಮಂಗಳೂರು ಜಿಲ್ಲಾ ಕಾರ್ಯಾಧ್ಯಕ್ಷ  ಮನೋಹರ್ ಸುವರ್ಣ, ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ  ಸುನಿಲ್ ಕೆ.ಆರ್., ಉಡುಪಿ ಜಿಲ್ಲಾ ಅಧ್ಯಕ್ಷ  ವಿಷ್ಣುಮೂರ್ತಿ ಆಚಾರ್, ಉಡುಪಿ ಜಿಲ್ಲಾ ಕಾರ್ಯದರ್ಶಿ  ದಿನೇಶ್ ಮೆಂಡನ್, ಚಿಕ್ಕಮಗಳೂರಿನ  ಶ್ಯಾಮ್ ಸೇರಿದಂತೆ ಉಡುಪಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೊಕೇಶ್ ಎಂ.ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ಹಾಗೂ ವಿಶ್ವಸ್ಥರಾದ ಸುಂದರ ಆಚಾರ್ಯ ಬೆಳುವಾಯಿ, ದಿನೇಶ್ ಆಚಾರ್ಯ ಪಡುಬಿದ್ರಿ, ದಯಾನಂದ ಆಚಾರ್ಯ ತೆಂಕನಿಡಿಯೂರು, ರಾಘವೇಂದ್ರ ಆಚಾರ್ಯ ಉಡುಪಿ, ಗಂಗಾಧರ ಆಚಾರ್ಯ ಕೊಂಡೆಯೂರು, ಸುರೇಶ್ ಆಚಾರ್ಯ ಇರಂದಾಡಿ, ಭರತ್ ಆರ್. ಆಚಾರ್ಯ ಕಾಸರಗೋಡು, ಲೋಲಾಕ್ಷ ಶರ್ಮ, ಕೇಶವ ಶರ್ಮ, ನವೀನ್ ಆಚಾರ್ಯ ಪಣಿಯೂರು, ಸುಧಾಕರ ಆಚಾರ್ಯ ಕುಕ್ಕಿಕಟ್ಟೆ, ಜಗದೀಶ್ ಆಚಾರ್ಯ ಕಪೆಟ್ಟು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement