ಪೆರ್ಲ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾರ್ವಜನಿಕರ ಓಡಾಟ ಕಡಿಮೆಯಾಗಿದ್ದು, ಇದರಿಂದ ಆಟೋ, ಟ್ಯಾಕ್ಸಿ ಹಾಗೂ ಇತರೆ ಬಾಡಿಗೆ ವಾಹನ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕಾರಣ ಜನರು ಅನಗತ್ಯ ಪ್ರಯಾಣವನ್ನು ತಪ್ಪಿಸುತ್ತಿರುವುದರಿಂದ ವಾಹನಗಳಿಗೆ ಬಾಡಿಗೆ ಸಿಗುತ್ತಿಲ್ಲ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಬಾಡಿಗೆ ಕಡಿಮೆಯಾದ ಕಾರಣ ದಿನದ ಖರ್ಚು ಕೂಡ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಇಂಧನದ ಬೆಲೆ, ವಾಹನದ ಸಾಲದ ಕಂತು, ನಿರ್ವಹಣಾ ವೆಚ್ಚ ಮತ್ತು ಕುಟುಂಬದ ಜೀವನೋಪಾಯವನ್ನು ಸಾಗಿಸುವುದು ಕಷ್ಟಕರವಾಗಿದೆ ಎಂದು ಹಲವಾರು ಚಾಲಕರು ಹೇಳಿದ್ದಾರೆ. ಮಳೆ ಮುಂದುವರಿದರೆ ಬಾಡಿಗೆ ವಾಹನ ಚಾಲಕರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

0 Comments