ಬದಿಯಡ್ಕ, : ಅಯೋಧ್ಯೆಯ ರಾಮಮಂದಿರ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಪೆರಡಾಲದ ಪಂಜಿತ್ತಡ್ಕ ನಿವಾಸಿ ರಾಜೇಶ್ (49) ಮಧ್ಯಪ್ರದೇಶದಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ರಾಜೇಶ್ ಅವರು ಈ ತಿಂಗಳ 16ರಂದು ತಮ್ಮ ತಾಯಿಯೊಂದಿಗೆ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದರು. ದೇವರ ದರ್ಶನ ಮುಗಿಸಿ ಜುಲೈ 21ರಂದು ಊರಿಗೆ ಮರಳುವ ಪ್ರಯಾಣ ಆರಂಭಿಸಿದ್ದರು. ಜುಲೈ 22ರಂದು ಮಧ್ಯಪ್ರದೇಶದ ಇಟಾರ್ಸಿ (Itarsi) ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದರು.
ಈ ವೇಳೆ ತಾಯಿಯನ್ನು ನಿಲ್ದಾಣದಲ್ಲೇ ಬಿಟ್ಟು ಮತ್ತೊಂದು ರೈಲಿಗೆ ಹತ್ತಿದ ರಾಜೇಶ್ ಬಳಿಕ ನಾಪತ್ತೆಯಾಗಿದ್ದಾರೆ. ನಂತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಅವರ ತಾಯಿಯನ್ನು ಸುರಕ್ಷಿತವಾಗಿ ಊರಿಗೆ ಕರೆತರಲಾಯಿತು.
ರಾಜೇಶ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಇದುವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ಕುರಿತು ರಾಜೇಶ್ ಅವರ ಸಹೋದರ ಅನಿಲ್ ಅವರು ಮಧ್ಯಪ್ರದೇಶ ಪೊಲೀಸ್ ಹಾಗೂ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜೇಶ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಈ ಸಂಖ್ಯೆಗಳಿಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ:
📞 04998 284033
📞 8848543989
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments