Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರೇಷನ್ ಕಾರ್ಡ್ ಅರ್ಹತಾ ಮಾನದಂಡಗಳಲ್ಲಿ ಬದಲಾವಣೆ ಸಾಧ್ಯತೆ

ತಿರುವನಂತಪುರ : ಕೇರಳದಲ್ಲಿ ಆದ್ಯತಾ ರೇಷನ್ ಕಾರ್ಡ್ ಪಡೆಯುವ ಅರ್ಹತಾ ಮಾನದಂಡಗಳಲ್ಲಿ ಸಡಿಲಿಕೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತಾವಿತ ಹೊಸ ನಿಯಮಗಳು ಜಾರಿಯಾದರೆ, 1,100 ಚದರ ಅಡಿ ವರೆಗೆ ವಿಸ್ತೀರ್ಣ ಹೊಂದಿರುವ ಮನೆ ಹಾಗೂ 800 ಸಿಸಿ ವರೆಗೆ ಎಂಜಿನ್ ಸಾಮರ್ಥ್ಯದ ಕಾರು ಹೊಂದಿರುವ ಕುಟುಂಬಗಳಿಗೂ ಆದ್ಯತಾ ರೇಷನ್ ಕಾರ್ಡ್ ಪಡೆಯುವ ಅವಕಾಶ ದೊರೆಯಬಹುದು.

ಪ್ರಸ್ತುತ 2018ರ ರಾಜ್ಯ ಆಹಾರ ಭದ್ರತಾ ನಿಯಮಾವಳಿ ಪ್ರಕಾರ, ಮನೆಯ ಗರಿಷ್ಠ ವಿಸ್ತೀರ್ಣ 1,000 ಚದರ ಅಡಿ ಇರಬೇಕು. ಜೊತೆಗೆ, ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಗಳು ಆದ್ಯತಾ ವಿಭಾಗಕ್ಕೆ ಅರ್ಹರಾಗುವುದಿಲ್ಲ. ಆದರೆ, ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಸಣ್ಣ ಕಾರು ಹೊಂದಿರುವುದು ಐಷಾರಾಮಿ ಅಲ್ಲ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ 800 ಸಿಸಿ ವರೆಗಿನ ಕಾರುಗಳಿಗೆ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ವಿಶೇಷವಾಗಿ, ದಿವ್ಯಾಂಗ ಸದಸ್ಯರ ಸಂಚಾರಕ್ಕಾಗಿ ವಾಹನ ಬಳಸುವ ಕುಟುಂಬಗಳಿಗೆ ಈ ಕ್ರಮದಿಂದ ಅನುಕೂಲವಾಗಲಿದೆ.

ಇದಲ್ಲದೆ, ಒಂದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರಿಗೂ ಭೂಮಿಯ ಸ್ವರೂಪದ ಆಧಾರದ ಮೇಲೆ ವಿಶೇಷ ಪರಿಗಣನೆ ನೀಡುವ ಸಾಧ್ಯತೆಯಿದೆ. ಜನರಿಂದ ವ್ಯಾಪಕ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಸಚಿವರು ನಾಗರಿಕ ಸರಬರಾಜು ಆಯುಕ್ತರಿಂದ ವರದಿ ಕೇಳಿದ್ದರು. ಬಳಿಕ ಸಿದ್ಧಗೊಂಡಿರುವ ವರದಿ ಪ್ರಸ್ತುತ ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ. ಆದ್ಯತಾ ರೇಷನ್ ಕಾರ್ಡ್‌ಗೆ ಹಲವು ಸರ್ಕಾರಿ ಸೌಲಭ್ಯಗಳು ಸಂಬಂಧಿಸಿರುವುದರಿಂದ, ಹಣಕಾಸು ಇಲಾಖೆಯ ಅನುಮೋದನೆಯ ಬಳಿಕವೇ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಪ್ರಸ್ತುತ ಕೇರಳದಲ್ಲಿ 5,94,209 ಅಂತ್ಯೋದಯ ಅನ್ನ ಯೋಜನೆ (AAY) ಕಾರ್ಡ್‌ಗಳು ಹಾಗೂ 37,73,184 ಆದ್ಯತಾ ರೇಷನ್ ಕಾರ್ಡ್‌ಗಳು ಇವೆ.ಇದೇ ವೇಳೆ, ರಾಜ್ಯ ಸರ್ಕಾರದ 100 ದಿನಗಳ ಕಾರ್ಯಯೋಜನೆಯ ಭಾಗವಾಗಿ 73,024 ಹೊಸ ಆದ್ಯತಾ ರೇಷನ್ ಕಾರ್ಡ್‌ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಮುಂದಿನ ತಿಂಗಳಿಂದ ಈ ಕುಟುಂಬಗಳಿಗೆ ಉಚಿತ ರೇಷನ್ ವಿತರಣೆ ಆರಂಭವಾಗಲಿದೆ.

Post a Comment

0 Comments

ಜಾಹೀರಾತು

Responsive Advertisement