ಆಲಪ್ಪುಳ : ರೋಗಿಯನ್ನು ಪರೀಕ್ಷಿಸುತ್ತಿದ್ದ ವೇಳೆ ವೈದ್ಯರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಆಳಪ್ಪುಲದಲ್ಲಿ ನಡೆದಿದೆ. ಮಣ್ಣಂಚೇರಿ ಕಾರುಣ್ಯ ಆಸ್ಪತ್ರೆಯ ವೈದ್ಯ ಡಾ. ದೇವಾನಂದ್ (74) ಮೃತಪಟ್ಟವರು. ಇವರು ಮೂಲತಃ ತೃಶ್ಯೂರು ಜಿಲ್ಲೆಯವರು ಎಂದು ತಿಳಿದುಬಂದಿದೆ. ರೋಗಿಯನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಡಾ. ದೇವಾನಂದ್ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಬಳಿಕ ಅವರಿಗೆ ಚಿಕಿತ್ಸೆಗೊಳಪಡಿಸಿ ರಕ್ಷಿಸಲು ಪ್ರಯತ್ನಿಸಲಾಯಿತಾದರೂ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

0 Comments