Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮನೆಯ ಅಂಗಳದಿಂದ ಬೈಕ್ ಕಳವು ಪ್ರಕರಣ ಭೇದಿಸಿದ ಬದಿಯಡ್ಕ ಪೊಲೀಸ್ – ಇಬ್ಬರು ಆರೋಪಿಗಳ ಬಂಧನ


ಬದಿಯಡ್ಕ : ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಪ್ರಕರಣವನ್ನು ಭೇದಿಸಿರುವ ಬದಿಯಡ್ಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಧೂರು ಪಟ್ಲದ ಕೊಲ್ಯ ಹೌಸ್ ನಿವಾಸಿ ಗಣೇಶ್ ಅಲಿಯಾಸ್ ಅಪ್ಪು (36) ಹಾಗೂ ಪೆರಿಯಡ್ಕದ ಮನ್ಸೂರ್ (28)  ಹೌಸ್ ನಿವಾಸಿ ಮನ್ಸೂರ್ ಬಂಧಿತರು. ಬಂಧಿತ ಆರೋಪಿಗಳನ್ನು ಇಂದು  ಮಧ್ಯಾಹ್ನ ಚೌಕಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಜುಲೈ 8ರಂದು ಕಡಂಬಳ ಸಮೀಪದ ಚಿಮ್ಮಿನಡ್ಕದಲ್ಲಿರುವ ಪ್ರಣಯ್ ಅವರ ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವಾಗಿತ್ತು. ಈ ಸಂಬಂಧ ಪ್ರಣಯ್ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಹಲವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬದಿಯಡ್ಕ ಸಿ ಐ ಅನೂಪ್ ಕೃಷ್ಣ ನೇತೃತ್ವದಲ್ಲಿ ನಡೆದ ಬೈಕ್ ಕಳವು ಪ್ರಕರಣದ ತನಿಖೆಯಲ್ಲಿ ಎಎಸ್‌ಐ ಪ್ರಸಾದ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಗೋಕುಲ್ ಹಾಗೂ ಸಿವಿಲ್ ಪೊಲೀಸ್ ಅಧಿಕಾರಿ ಶ್ರೀನೇಶ್ ಪ್ರಮುಖ ಪಾತ್ರವಹಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Post a Comment

0 Comments

ಜಾಹೀರಾತು

Responsive Advertisement