ಬೆಂಗಳೂರು : ಮನೆ ಮುಂದೆ ಒಣಹಾಕಿದ್ದ ಮಹಿಳೆಯರ ಒಳಉಡುಪುಗಳು ಪದೇಪದೇ ನಾಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಯುವತಿಯರು ರೂಪಿಸಿದ ಚಾಣಾಕ್ಷ ಯೋಜನೆ ಕೊನೆಗೂ ಕಳ್ಳನನ್ನು ಪೊಲೀಸರ ಬಲೆಗೆ ಬೀಳಿಸಿದೆ. ಇಂದಿರಾನಗರದ ಹೊಯ್ಸಳನಗರದಲ್ಲಿ ಈ ಘಟನೆ ವರದಿಯಾಗಿದೆ.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಕೆಲವು ವಾರಗಳಿಂದ ಮನೆ ಕಾಂಪೌಂಡ್‌ನಲ್ಲಿ ಒಣಹಾಕುತ್ತಿದ್ದ ಒಳಉಡುಪುಗಳು ಮಾತ್ರ ನಾಪತ್ತೆಯಾಗುತ್ತಿದ್ದವು. ಕೆಲವೊಮ್ಮೆ ಹಳೆಯ ಬಟ್ಟೆಗಳು ಮರಳಿ ಸಿಕ್ಕಿದ್ದರೂ, ಹೊಸ ಒಳಉಡುಪುಗಳು ಕಳ್ಳತನವಾಗುತ್ತಲೇ ಇದ್ದವು. ಇದರಿಂದ ಅನುಮಾನಗೊಂಡ ಅವರು ಕಳ್ಳನನ್ನು ಹಿಡಿಯಲು ಹಿಡನ್ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದರು.
ಸುಮಾರು 1,300 ರೂ. ವೆಚ್ಚದಲ್ಲಿ ಆನ್‌ಲೈನ್ ಮೂಲಕ ಕ್ಯಾಮೆರಾ ಖರೀದಿಸಿ, ಜುಲೈ 1ರ ರಾತ್ರಿ ಬಟ್ಟೆ ಒಣಹಾಕಿದ್ದ ಸ್ಥಳದ ಬಳಿ ಅಳವಡಿಸಿದರು. ಮರುದಿನ ಕ್ಯಾಮೆರಾದ ದೃಶ್ಯ ಪರಿಶೀಲಿಸಿದಾಗ, ಬೆಳಗಿನ ಜಾವ ಸುಮಾರು 3 ಗಂಟೆಗೆ ವ್ಯಕ್ತಿಯೊಬ್ಬ ಮನೆ ಕಾಂಪೌಂಡ್‌ಗೆ ನುಗ್ಗಿ ಒಳಉಡುಪುಗಳನ್ನು ಕಳವು ಮಾಡುತ್ತಿರುವುದು ದಾಖಲಾಗಿತ್ತು.
ಯುವತಿಯರು ಈ ದೃಶ್ಯಗಳನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ತನಿಖೆ ನಡೆಸಿದ ಇಂದಿರಾನಗರ ಪೊಲೀಸರು, ಅಸ್ಸಾಂ ಮೂಲದ 23 ವರ್ಷದ ಅಬ್ದುಲ್ ಹುಸೇನ್ ಅಲಿಯಾಸ್ ಸದ್ದಾಂ ಹುಸೇನ್‌ನನ್ನು ಬಂಧಿಸಿದ್ದಾರೆ. ಆತ ಇ-ಕಾಮರ್ಸ್ ಸಂಸ್ಥೆಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದ್ದಾರೆ.

0 Comments