ಬದಿಯಡ್ಕ : ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಗೃಹಿಣಿಯೋರ್ವೆ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಹೊಟೇಲ್ ವೃತ್ತಿ ನಡೆಸುತ್ತಿದ್ದ ಕುಂಬ್ಡಾಜೆ ಕೊಳಂಬೆಯ ನಿವಾಸಿ ವಿಠಲ ರೈ ಅವರ ಧರ್ಮಪತ್ನಿ ಬೇಬಿ (52) ಮೃತ ಗೃಹಿಣಿ. ಇವರು ಕಳೆದ ಕೆಲವು ಸಮಯದಿಂದ ಅರ್ಬುದ ರೋಗ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಮೃತರು ಪತಿ ಹಾಗೂ ಮಕ್ಕಳಾದ ವಿಜಿತ್, ಸುಜಿತ್ ಎಂಬಿವರನ್ನಗಲಿದ್ದಾರೆ.

0 Comments