ಕಾಸರಗೋಡು : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಮನೆಯ ಮೇಲೆಗೆ ಉರುಳಿಬಿದ್ದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕುತ್ತಿಕ್ಕೋಲ್ ಸಮೀಪದ ಅತ್ತಿಯಡ್ಕದಲ್ಲಿ ನಡೆದಿದೆ.
ಕುತ್ತಿಕ್ಕೋಲಿನಿಂದ ಕೊಟ್ಟೋಡಿಗೆ ಅಡಿಕೆ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗು ಪ್ರದೇಶದಲ್ಲಿದ್ದ ನಾರಾಯಣ ಅವರ ಹಳೆಯ ಮನೆಯ ಮೇಲೆಗೆ ಉರುಳಿಬಿದ್ದಿದೆ. ಲಾರಿ ಬಂದೆರಗಿದ ರಭಸಕ್ಕೆ ಮನೆಯ ಮುಂಭಾಗ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಮೇಲ್ಛಾವಣಿ ಹಾಗೂ ಗೋಡೆಗಳು ಕುಸಿದಿವೆ.
ಅಪಘಾತದಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾರಾಯಣ ಮತ್ತು ಅವರ ಕುಟುಂಬ ಈಗಾಗಲೇ ಸಮೀಪದ ಶೆಡ್‌ನಲ್ಲಿ ವಾಸಿಸುತ್ತಿದ್ದ ಕಾರಣ, ಅಪಘಾತ ಸಂಭವಿಸಿದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ಅದೃಷ್ಟವಶಾತ್ ತಪ್ಪಿದೆ ಎನ್ನಲಾಗಿದೆ.

0 Comments