Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮನೆಯ ಅಂಗಳದ ಸೋಲಾರ್ ಡ್ರೈಯರ್‌ನಿಂದ 215 ಕಿ.ಗ್ರಾಂ. ಅಡಿಕೆ ಕಳವು

                                                             ಸಾಂದರ್ಭಿಕ ಚಿತ್ರ

ಬದಿಯಡ್ಕ : ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಲಾರ್ ಡ್ರೈಯರ್‌ನಲ್ಲಿ ಒಣಗಲು ಇಟ್ಟಿದ್ದ ಸುಮಾರು 215 ಕಿ.ಗ್ರಾಂ. ಅಡಿಕೆ ಕಳುವಾಗಿರುವ ಘಟನೆ ನಡೆದಿದೆ. ಏತ್ತಡ್ಕ ನಿವಾಸಿ ಇಬ್ರಾಹಿಂ (36) ಅವರ ಮನೆಯ ಅಂಗಳದಲ್ಲಿದ್ದ ಟಾರ್ಪಾಲಿನ್‌ನಿಂದ ನಿರ್ಮಿಸಲಾದ ಸೋಲಾರ್ ಡ್ರೈಯರ್‌ನಲ್ಲಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ₹1,22,500 ಮೌಲ್ಯದ ಅಡಿಕೆ ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಇಬ್ರಾಹಿಂ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Post a Comment

0 Comments

ಜಾಹೀರಾತು

Responsive Advertisement