ಬದಿಯಡ್ಕ : ನೀರ್ಚಾಲಿನ ಮೇಲಿನ ಪೇಟೆಯಲ್ಲಿ ಕುಡಿದು ಬಂದು ಅಂಗಡಿಯೊಂದರ ಮುಂಭಾಗ ದಾಂಧಲೆ ಎಬ್ಬಿಸಿ ಬೆದರಿಕೆ ಹಾಕಿದ್ದ ಯುವಕನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲು ಸಮೀಪದ ಮೆಣಸಿನಪಾರೆ ಮೂಲದ ದೀಪಕ್ ಅಲಿಯಾಸ್ ಸತೀಶ್ (45) ಎಂಬಾತನನ್ನು ಬದಿಯಡ್ಕ ಠಾಣಾ ಎಸ್‌ಐ ರೂಪೇಶ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತ ಯುವಕ ಈ ಹಿಂದೆ ನೀರ್ಚಾಲು ಬಳಿಯ ರತ್ನಗಿರಿ ಕುದುರೆಕಾಳಿಯಮ್ಮ ದೇವಸ್ಥಾನದಿಂದ ಗಂಟೆಗಳನ್ನು ಕದ್ದ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ. ನೀರ್ಚಾಲು ಪೇಟೆಯಲ್ಲಿ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಬೆದರಿಕೆ ಹಾಕುವ ಪ್ರವೃತ್ತಿ ಹೊಂದಿದ್ದಾನೆ. ಪೊಲೀಸರು ಅವನನ್ನು ಹಿಡಿದರೂ, ಅವರು ಅವನನ್ನು ಅರ್ಧದಾರಿಯಲ್ಲೇ ಬಿಡುತ್ತಿದ್ದು, ಇದು ಸ್ಥಳೀಯರಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ನಿನ್ನೆ ಮಧ್ಯಾಹ್ನ ಇದೇ ಯುವಕ ನೀರ್ಚಾಲಿನ ಮೇಲಿನ ಪೇಟೆಯಲ್ಲಿರುವ ಸೆಲೂನ್ ಅಂಗಡಿಯ ಗಾಜನ್ನು ಒಡೆದು ಪ್ರಶ್ನಿಸಿದವರನ್ನು ಬೆದರಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಬಂಧಿಸಿದರು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments