ಕಾಸರಗೋಡು : ಉಕ್ರೇನ್‌ನ ಒಡೆಸಾ ಸಮುದ್ರತೀರದ ಬಳಿ ಸಾಗುತ್ತಿದ್ದ ಸರಕು ಹಡಗಿನ ಮೇಲೆ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಕಾಸರಗೋಡು ಜಿಲ್ಲೆಯ ವೆಳ್ಳರಿಕ್ಕುಂಡ್ ಮೂಲದ ಅಖಿಲ್ ಜೋಯಲ್ (26) ಸೇರಿದಂತೆ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ. ಎಕೆಜಿ ನಗರದ ಜೋಯಲ್ ಮತ್ತು ಸಾಲಿ ದಂಪತಿಯ ಪುತ್ರ ಅಖಿಲ್ ಜೋಯಲ್ ಕಳೆದ ಐದು ವರ್ಷಗಳಿಂದ ಮೆರೈನ್ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಅವರ ವಿವಾಹ ನಿಶ್ಚಯವಾಗಿದ್ದು, ಒಂದು ತಿಂಗಳ ಹಿಂದೆ ಮತ್ತೆ ಕರ್ತವ್ಯಕ್ಕೆ ಸೇರಿದ್ದರು ಎಂದು ತಿಳಿದುಬಂದಿದೆ.
ದಾಳಿಗೆ ಒಳಗಾದ ಗೋಲ್ಡನ್ ಲಿಯೋ ಹೆಸರಿನ ಹಡಗು ಟರ್ಕಿಯಿಂದ ಪ್ರಯಾಣ ಬೆಳೆಸಿತ್ತು. ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದು, ಅವರಲ್ಲಿ ಬಹುತೇಕರು ಭಾರತ ಮತ್ತು ಸಿರಿಯಾ ದೇಶಗಳವರಾಗಿದ್ದರು. 7 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

0 Comments