Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅಲ್ಫಹಮ್ ಚಿಕನ್ ಸೇವಿಸಿದ ಬಳಿಕ ಯುವತಿಗೆ ವಾಂತಿ, ಭೇದಿ: ಕೆಫೆಗೆ 96 ಸಾವಿರ ರೂ. ದಂಡ

ಪತ್ತನಂತಿಟ್ಟ : ಕೆಫೆಯಲ್ಲಿ ಗ್ರಿಲ್ಡ್ ಅಲ್ಫಹಮ್ ಚಿಕನ್ ಸೇವಿಸಿದ ಬಳಿಕ ಯುವತಿಗೆ ಆಹಾರ ವಿಷಬಾಧೆ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ಆಯೋಗವು ಕೆಫೆಗೆ 96,000 ರೂ . ಪರಿಹಾರ ನೀಡುವಂತೆ ಆದೇಶಿಸಿದೆ.

2025ರ ಅಕ್ಟೋಬರ್ 21ರಂದು ಯುವತಿ ಹಾಗೂ ಆಕೆಯ ಸಹೋದರಿ ಕೆಫೆಯಲ್ಲಿ ಗ್ರಿಲ್ಡ್ ಚಿಕನ್ ಸೇವಿಸಿದ್ದರು. ಬಳಿಕ ಆಹಾರದ ರುಚಿಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಕೆಫೆ ಸಿಬ್ಬಂದಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.

ನಂತರ ಯುವತಿಗೆ ಅಸ್ವಸ್ಥತೆ, ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸುಮಾರು 36,393 ರೂ. ವೆಚ್ಚವಾಗಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದರು. ಈ ವೆಚ್ಚವನ್ನು ಭರಿಸುವಂತೆ ಕೆಫೆ ಮಾಲೀಕರನ್ನು ಕೇಳಿದರೂ ನಿರಾಕರಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ ಯುವತಿ ಸಲ್ಲಿಸಿದ ಆಸ್ಪತ್ರೆಯ ದಾಖಲೆಗಳಲ್ಲಿ ಸಾಲ್ಮೊನೆಲ್ಲಾ ಸೋಂಕು ದೃಢಪಟ್ಟಿರುವುದನ್ನು ಗ್ರಾಹಕ ಆಯೋಗ ಗಮನಿಸಿದೆ. ಕಲುಷಿತ ಅಥವಾ ಸರಿಯಾಗಿ ಬೇಯಿಸದ ಆಹಾರ ಸೇವನೆಯಿಂದ ಸಾಲ್ಮೊನೆಲ್ಲಾ ಸೋಂಕು ಉಂಟಾಗುವ ಸಾಧ್ಯತೆಯಿದ್ದು, ವಾಂತಿ ಮತ್ತು ಭೇದಿ ಇದರ ಸಾಮಾನ್ಯ ಲಕ್ಷಣಗಳಾಗಿವೆ.

ಕೆಫೆ ಪರವಾಗಿ ಅದೇ ದಿನ 100ಕ್ಕೂ ಹೆಚ್ಚು ಮಂದಿ ಆಹಾರ ಸೇವಿಸಿದ್ದರೂ ಯಾರಿಗೂ ಆಹಾರ ವಿಷಬಾಧೆ ಉಂಟಾಗಿಲ್ಲ ಎಂದು ವಾದಿಸಲಾಗಿತ್ತು. ಆದರೆ ವೈದ್ಯಕೀಯ ದಾಖಲೆಗಳನ್ನು ಪರಿಗಣಿಸಿದ ಆಯೋಗವು ಯುವತಿಯ ದೂರನ್ನು ಅಂಗೀಕರಿಸಿ, 30 ದಿನಗಳೊಳಗೆ 96,000 ರೂ.  ಪರಿಹಾರ ಪಾವತಿಸುವಂತೆ ಕೆಫೆಗೆ ಆದೇಶಿಸಿದೆ. ನಿಗದಿತ ಅವಧಿಯಲ್ಲಿ ಪರಿಹಾರ ಪಾವತಿಸದಿದ್ದರೆ ವಾರ್ಷಿಕ ಶೇ.10ರಷ್ಟು ಬಡ್ಡಿ ಪಾವತಿಸಬೇಕೆಂದು ಆಯೋಗ ತಿಳಿಸಿದೆ.

Post a Comment

0 Comments

ಜಾಹೀರಾತು

Responsive Advertisement