Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅವಧಿ ಮೀರಿದ ಔಷಧಿ ವಿತರಣೆ ಆರೋಪ : ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ವಿರುದ್ಧ ಮತ್ತೊಂದು ದೂರು

ಪೈವಳಿಕೆ :  ಅವಧಿ ಮೀರಿದ ಔಷಧಿ ವಿತರಿಸಲಾಗಿದೆ ಎಂದು ಆರೋಪಿಸಿ ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಬಾಯಾರು ನಿವಾಸಿ ಅವ್ವಮ್ಮ (62) ಅವರು ಜಿಲ್ಲಾ ವೈದ್ಯಾಧಿಕಾರಿ ಹಾಗೂ ಪೈವಳಿಕೆ  ಪಂಚಾಯತ್ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಅಲರ್ಜಿಗೆ ಚಿಕಿತ್ಸೆ ಪಡೆಯಲು ಸೆಪ್ಟೆಂಬರ್ 19ರಂದು ಅವ್ವಮ್ಮ ಕುಟುಂಬ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ವೈದ್ಯರನ್ನು ಭೇಟಿಯಾದ ಬಳಿಕ ನೀಡಿದ ಚೀಟಿಯಂತೆ ಔಷಧಿ ಪಡೆದು ಮನೆಗೆ ತೆರಳಿದ್ದರು. ಸುಮಾರು ಏಳು ದಿನಗಳ ಕಾಲ ಔಷಧಿ ಸೇವಿಸಿದ ಬಳಿಕ, 15 ವರ್ಷದ ಬಾಲಕನಿಗೆ ಅವಧಿ ಮೀರಿದ ಔಷಧಿ ನೀಡಲಾಗಿದೆ ಎಂಬ ಸುದ್ದಿ ಅವರ ಗಮನಕ್ಕೆ ಬಂದಿದೆ. ನಂತರ ತಾವು ಪಡೆದ ಔಷಧಿಯನ್ನು ಪರಿಶೀಲಿಸಿದಾಗ, ಜುಲೈನಲ್ಲೇ ಅವಧಿ ಮುಗಿದಿದ್ದ ಔಷಧಿಯನ್ನು ನೀಡಿರುವುದು ಗಮನಕ್ಕೆ ಬಂದಿದೆ ಎಂದು ಅವ್ವಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement