Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅ.5ರಂದು ‘ಕೊಡಿಯಡಿತ ನಿರೇಲ್ ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮ

ಮಂಗಳೂರು : ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಹಾಗೂ ದೈವಾರಾಧನೆ ಪರಂಪರೆ ಸಂರಕ್ಷಿಸುವ ಉದ್ದೇಶದಿಂದ ‘ಕೊಡಿಯಡಿತ ನಿರೇಲ್ ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮವನ್ನು ಅ.5ರಂದು ಆಯೋಜಿಸಲಾಗಿದೆ.

ಮಂಗಳೂರಿನ ಪುರಭವನದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೈವಸೇವೆಯಲ್ಲಿ ತೊಡಗಿರುವ ಪರಿಚಾರಕರಿಗೆ ಅಪಘಾತ, ಅನಾರೋಗ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ನೆರವಾಗಲು ವಿಮಾ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ಸಹಾಯ, ವೈದ್ಯಕೀಯ ನೆರವು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ನೆರವು ಸೇರಿದಂತೆ ವಿವಿಧ ಯೋಜನೆಗಳನ್ನು ಟ್ರಸ್ಟ್ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಳೆದ ಬಾರಿ 400ರಿಂದ 450 ಮಂದಿ ದೈವ ಪರಿಚಾರಕರಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದ್ದು, ಈ ಬಾರಿ 500ಕ್ಕೂ ಹೆಚ್ಚು ಮಂದಿಗೆ ವಿಮೆ ಮಾಡಿಸಲಾಗುತ್ತಿದೆ. ಹೃದಯಾಘಾತದಿಂದ ಮೃತಪಟ್ಟ ಕಾವೂರು ಶಾಂತಿನಗರದ ಸುದೇಶ್ ಪೂಜಾರಿ ಅವರ ಕುಟುಂಬಕ್ಕೆ ಕಳೆದ ಬಾರಿ ₹1.07 ಲಕ್ಷ ನೆರವು ನೀಡಲಾಗಿತ್ತು. ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ವಿಮಾ ಸೌಲಭ್ಯದ ಜತೆಗೆ ಟ್ರಸ್ಟ್ ವತಿಯಿಂದ ₹50 ಸಾವಿರದವರೆಗೆ ಸಾಂತ್ವನ ನೆರವು ನೀಡುವ ಯೋಜನೆಯೂ ಇದೆ ಎಂದು ತಿಳಿಸಿದರು.

ಅ.5ರ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಾಮಾಜಿಕ ಜಾಲತಾಣ ಲೋಕಾರ್ಪಣೆ, ಫಲಾನುಭವಿಗಳಿಗೆ ವಿಮಾ ಯೋಜನೆಯ ದಾಖಲೆ ಹಸ್ತಾಂತರ, ಸದಸ್ಯರಿಗೆ ಡಿಜಿಟಲ್ ಗುರುತಿನ ಚೀಟಿ ವಿತರಣೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಬೆಳಗ್ಗೆ 11.30ಕ್ಕೆ ‘ಚಾ ಪರ್ಕ’ ತಂಡದಿಂದ ತುಳು ಹಾಸ್ಯ ನಾಟಕ ಪ್ರದರ್ಶನವೂ ಇರಲಿದೆ.

ಅ.8ರಂದು ಕಾವೂರು ಸೊಸೈಟಿ ಹಾಲ್‌ನಲ್ಲಿ ಅಂಚೆ ಇಲಾಖೆಯ ಸಹಯೋಗದಲ್ಲಿ ವಿಮಾ ಯೋಜನೆ ಹಾಗೂ ಎ.ಜೆ. ಆಸ್ಪತ್ರೆಯ ಸಹಕಾರದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ವಿಜಯ್ ಚೌಟ ಕೆಂಜಾರು, ದಿನೇಶ್ ಕಕ್ಕೆಪದವು, ಜಿತೇಶ್ ಮಡ್ಯಾರ್, ಸುದರ್ಶನ್ ಸನಿಲ್ ಅಬ್ಬೆಟ್ಟು ಹಾಗೂ ಹೊನ್ನಯ್ಯ ಪೂಜಾರಿ ಪೆರಾರ ಬಜಪೆ ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement