Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಕಂಡಕ್ಟರ್ ಆಗಿದ್ದ ಪೈವಳಿಕೆ ನಿವಾಸಿಯ ಮೃತದೇಹ ಕೆರೆಯಲ್ಲಿ ಪತ್ತೆ

ಉಪ್ಪಳ : ಕೆಎಸ್‌ಆರ್‌ಟಿಸಿಯಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೈವಳಿಕೆ ಬಳ್ಳೂರು ತೆಂಕಮಜಲು ನಿವಾಸಿ ಮೋಹನ ನಾಯ್ಕ್ (50) ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಮೃತರು ದಿ. ಈಶ್ವರ ನಾಯ್ಕ್ ಹಾಗೂ ಶಾರದಾ ಅವರ ಪುತ್ರರಾಗಿದ್ದಾರೆ.

ಬೆಳಗ್ಗೆ ಮನೆಯಿಂದ ಹೊರಟಿದ್ದ ಅವರು ಮಧ್ಯಾಹ್ನವಾದರೂ ಮನೆಗೆ ಮರಳಿರಲಿಲ್ಲ. ಈ ನಡುವೆ ಸ್ಥಳೀಯರು ಕೆರೆಯ ಸಮೀಪ ಅವರ ಚಪ್ಪಲಿಯನ್ನು ಕಂಡು ಅನುಮಾನಗೊಂಡು ಉಪ್ಪಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೆರೆಯಿಂದ ಮೋಹನ ಅವರನ್ನು ಹೊರತೆಗೆದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಶವಾಗಾರದಲ್ಲಿ ಇರಿಸಲಾಗಿದೆ.

ಅವಿವಾಹಿತರಾಗಿದ್ದ ಮೋಹನ ನಾಯ್ಕ್ ಈ ಹಿಂದೆ ಕೆಲಕಾಲ ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ಮೃತರು ಸಹೋದರರಾದ ದೇವಪ್ಪ, ದಿವಾಕರ ಹಾಗೂ ಅಶೋಕ ಎಂಬಿವರನ್ನಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement