Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆರು ಗಂಟೆ ವಿದ್ಯುತ್ ವ್ಯತ್ಯಯ: ಆಮ್ಲಜನಕ ಯಂತ್ರ ಸ್ಥಗಿತಗೊಂಡು ವೃದ್ಧೆ ಸಾವು

ಕಾಞಂಗಾಡು : ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಪರಿಣಾಮ ಆಮ್ಲಜನಕ ಕಾನ್ಸೆಂಟ್ರೇಟರ್ ಕಾರ್ಯನಿರ್ವಹಿಸದೆ 75 ವರ್ಷದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಅತಿಂಜಾಲ್ ಕೆ.ಕೆ.ಪುರ ನಿವಾಸಿ ಬೀರಾನ್ ಕಾಡತ್ ಖಾದರ್ ಅವರ ಪತ್ನಿ ಮರಿಯಂ (75) ಮೃತಪಟ್ಟವರು. ಕಫದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಮರಿಯಂ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಬಳಿಕ ಆಮ್ಲಜನಕ ಕಾನ್ಸೆಂಟ್ರೇಟರ್‌ನ ನೆರವಿನಿಂದ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು.

ಗಾಂಧಿ ಜಯಂತಿಯಂದು ಮಧ್ಯಾಹ್ನ ಸುಮಾರು 2.30ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ರಾತ್ರಿ 8.30ರ ಸುಮಾರಿಗೆ ವಿದ್ಯುತ್ ಮರುಸ್ಥಾಪನೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿದ್ಯುತ್ ಕಡಿತವಾದ ಬಳಿಕ ಇನ್ವರ್ಟರ್ ಮೂಲಕ ಆಮ್ಲಜನಕ ಯಂತ್ರವನ್ನು ಕಾರ್ಯನಿರ್ವಹಿಸಲಾಗಿತ್ತು. ಆದರೆ ರಾತ್ರಿ ವೇಳೆಗೆ ಇನ್ವರ್ಟರ್‌ನ ಚಾರ್ಜ್ ಖಾಲಿಯಾದ ಹಿನ್ನೆಲೆಯಲ್ಲಿ ಆಮ್ಲಜನಕ ಕಾನ್ಸೆಂಟ್ರೇಟರ್ ಕೂಡ ಸ್ಥಗಿತಗೊಂಡಿತು. ಇದಾದ ಬಳಿಕ ಮರಿಯಂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಯಾವುದೇ ಮುನ್ನೆಚ್ಚರಿಕೆ ನೀಡದೆ ಕೆಎಸ್‌ಇಬಿ ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದೆ ಎಂದು ವಾರ್ಡ್ ಸದಸ್ಯ ಖಾಲಿದ್ ಅರಬಿಕಾಡತ್ ಆರೋಪಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement