Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನಾಳೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಕರ್ನಾಟಕದ ನುಡಿ ತೋಟ ಬಹುಭಾಷಾ ಕವಿಗೋಷ್ಠಿ

ಬೆಂಗಳೂರು : ಭಾರತೀಯ ವಿದ್ಯಾಭವನ ಬೆಂಗಳೂರು ಇದರ ವಜ್ರಮಹೋತ್ಸವ ಸಂದರ್ಭದಲ್ಲಿ ಕರ್ನಾಟಕದ ನುಡಿ ತೋಟ ಎಂಬ ವಿಶಿಷ್ಟ ಪರಿಕಲ್ಪನೆಯ ಸಾಹಿತ್ಯೋತ್ಸವ, ಸಾಂಸ್ಕೃತಿಕ ಮೇಳ, ಪುಸ್ತಕ ಪ್ರದರ್ಶನ, ಹಾಗೂ ಮಾರಾಟ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್ತು ಸಹಕಾರದಲ್ಲಿ ಭಾರತೀಯ ವಿದ್ಯಾ ಭವನದಲ್ಲಿ ಜರಗುತ್ತಿದೆ.

ಇದರ ಅಂಗವಾಗಿ ಅಕ್ಟೋಬರ್ 4 ಭಾನುವಾರ ಮಧ್ಯಾಹ್ನ 02.30 ಗಂಟೆಗೆ  ನುಡಿ ತೋಟ ಬಹುಭಾಷಾ ಕವಿಗೋಷ್ಠಿ ಜರಗಲಿದೆ. ತುಳು, ಹವ್ಯಕ, ಕೊಡವ, ಕೊಂಕಣಿ, ಅರೆಭಾಷೆ ಕವಿಗಳಾದ ರಾಜಶ್ರೀ ಟಿ. ರೈ ಪೆರ್ಲ, ವಿದ್ಯಾ ಭರತನಹಳ್ಳಿ, ಡಾ॥ ಕಾವೇರಿ ಪ್ರಕಾಶ್, ಪೂರ್ಣಿಮ ಸುರೇಶ್,  ಸ್ಮಿತಾ ಅಮೃತ್‌ ರಾಜ್ ಸಂಪಾಜೆ ಭಾಗವಹಿಸುವರು. ಎನ್.ರವಿಕುಮಾರ್ ನಿರ್ವಹಿಸುವರು. 3 ಗಂಟೆಗೆ ನುಡಿ ತೋಟ ಪಟ್ಟಾಂಗ ಎಂಬ ಕಾರ್ಯಕ್ರಮದಲ್ಲಿ ಶಾಸನತಜ್ಞ ಡಾ. ಪಿ.ವಿ. ಕೃಷ್ಣಮೂರ್ತಿ, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಸಿ. ನಾಗಣ್ಣ, ಪ್ರೊ. ಮೇಟಿ ಮಲ್ಲಿಕಾರ್ಜುನ ಭಾಗವಹಿಸಿ ವಿಷಯ ಮಂಡಿಸುವರು. ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ, ಅಧ್ಯಕ್ಷತೆವಹಿಸುವರು.

Post a Comment

0 Comments

ಜಾಹೀರಾತು

Responsive Advertisement