Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ವರ್ಕ್ ಎಕ್ಸ್‌ಪೀರಿಯನ್ಸ್ ಫೇರ್‌ನಲ್ಲಿ ಎ.ಎಸ್.ಬಿ.ಎಸ್ ಕುಂಟಿಕಾನ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಬದಿಯಡ್ಕ: ಜಿ.ಎಚ್.ಎಸ್.ಎಸ್  ಅಡೂರು ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಅಂಗವಾಗಿ ಆಯೋಜಿಸಲಾದ ವರ್ಕ್ ಎಕ್ಸ್‌ಪೀರಿಯನ್ಸ್ ಫೇರ್‌ನಲ್ಲಿ ಎ.ಎಸ್.ಬಿ.ಎಸ್  ಕುಂಟಿಕಾನ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಬಿದಿರಿನ ಉತ್ಪನ್ನಗಳ (Bamboo Products) ವಿಭಾಗದಲ್ಲಿ UP ವಿಭಾಗದ 7ನೇ ತರಗತಿಯ ಭವಿಷ್ ಎ. ಆರ್. ಪ್ರಥಮ ಸ್ಥಾನ ಗಳಿಸಿದರೆ, LP ವಿಭಾಗದ 4ನೇ ತರಗತಿಯ ಶ್ರವಂತ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಫ್ಯಾಬ್ರಿಕ್ ಪೇಂಟಿಂಗ್ (Fabric Painting) ವಿಭಾಗದಲ್ಲಿ UP ವಿಭಾಗದ ಕೃಷ್ಣಪ್ರಿಯಾ ಎಚ್. ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಇದಲ್ಲದೆ, ಶಾಲೆಯ LP ಹಾಗೂ UP ವಿಭಾಗಗಳ ಹಲವಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪಿಟಿಎ ಹಾಗೂ ಒಎಸ್ಎ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರನ್ನೂ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆ, ಪರಿಶ್ರಮ ಮತ್ತು ಸೃಜನಶೀಲತೆ ಶಾಲೆಗೆ ಹೆಮ್ಮೆಯ ಕ್ಷಣವಾಗಿದೆ.

Post a Comment

0 Comments

ಜಾಹೀರಾತು

Responsive Advertisement