ಕುಂಬಳೆ: ಬಂದ್ಯೋಡು ಸಮೀಪದ ಅಡ್ಕ ನಿವಾಸಿ ಆಟೋ ಚಾಲಕರೊಬ್ಬರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಂದ್ಯೋಡು ಆಟೋ ಸ್ಟೇಂಡ್ ನ ಚಾಲಕ ಎ. ನಾಗೇಶ್ ಪೂಜಾರಿ (37) ಮೃತ ವ್ಯಕ್ತಿ. ಬುಧವಾರ ಸಂಜೆ ಸುಮಾರು 3 ಗಂಟೆಯ ವೇಳೆಗೆ ಮನೆಯ ಹಾಲ್‌ನಲ್ಲಿದ್ದ ಫ್ಯಾನ್‌ನ ಕೊಕ್ಕೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಆರ್ಥಿಕ ಹೊರೆಗಳಿಂದ ಉಂಟಾದ ಸಂಕಷ್ಟ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಪ್ಪ ಪೂಜಾರಿ ಮತ್ತು ಗಿರಿಜಾ ದಂಪತಿಯ ಪುತ್ರರಾಗಿರುವ ನಾಗೇಶ್, ಪತ್ನಿ ಸಂಧ್ಯಾ ಹಾಗೂ ಪುತ್ರಿ ಅನ್ವಿಕಾ ಅವರನ್ನು ಅಗಲಿದ್ದಾರೆ. ದಿನೇಶ್ ಪೂಜಾರಿ, ಜಗದೀಶ್ ಪೂಜಾರಿ, ಆಶಾಲತಾ, ಹೇಮಲತಾ, ಮಮತಾ, ಧನಲಕ್ಷ್ಮಿ ಮತ್ತು ದೀಪಿಕಾ ಇವರ ಸಹೋದರಿ ಸಹೋದರರಾಗಿದ್ದಾರೆ.

0 Comments