ಕಾಸರಗೋಡು :ಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ವಿಶೇಷ ವಿಕಲಚೇತನ ಶಾಲೆಯಲ್ಲಿ 'ರಾಷ್ಟ್ರೀಯ ಶಿಕ್ಷಣ ದಿನ'ವನ್ನು ಆಚರಿಸಲಾಯಿತು. ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ವಿಜಯನ್ ಮೇಲೋತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ, ವಿದ್ಯಾರ್ಥಿ ಕಿಶಾನ್ ಅವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಸುಮಿತ್ರಾ ಅವರ ಸಮರ್ಪಣಾ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಪೊಲೀಸ್ ಉಪನಿರೀಕ್ಷಕರಾದ ವಿಜಯನ್ ಮೆಲೋತ್ ಸುಮಿತ್ರಾ ಅವರನ್ನು ಅಭಿನಂದಿಸಿದರು. ಇದಲ್ಲದೆ, ಕಿಶಾನ್ ಅವರ ಚಲನವಲನಕ್ಕೆ ಅನುಕೂಲವಾಗಲು ಹಾಗೂ ಅವರ ದೈನಂದಿನ ಜೀವನವನ್ನು ಹೆಚ್ಚು ಸುಗಮ ಮತ್ತು ಆರಾಮದಾಯಕವಾಗಿಸಲು ಅವರಿಗೆ ಗಾಲಿಕುರ್ಚಿಯನ್ನು (Wheelchair) ಒದಗಿಸಲಾಯಿತು.
ಈ ಆಚರಣೆಯು ಶಿಕ್ಷಣದ ಮಹತ್ವ, ಸಾಮಾಜಿಕ ಜವಾಬ್ದಾರಿ, ಮಾನವೀಯತೆ, ಕರುಣೆ ಹಾಗೂ ವಿಕಲಚೇತನ ವ್ಯಕ್ತಿಗಳಿಗೆ ಸಮಾನ ಅವಕಾಶ ಮತ್ತು ಬೆಂಬಲ ನೀಡುವ ಮಹತ್ವವನ್ನು ಸಾರಿತು.
ಅಧ್ಯಾಪಿಕೆ ಅಶ್ವತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲರಾದ ಉದಯ ಕುಮಾರ್ ಅವರು ಸ್ವಾಗತಿಸಿ, ಅಧ್ಯಾಪಿಕೆ ನಿಮಿಷಾ ಅವರು ವಂದಿಸಿದರು. ಪೊಲೀಸ್ ಅಧಿಕಾರಿಗಳಾದ ಪ್ರಜೀಶ್, ಪ್ರಸಾದ್, ಶಿಕ್ಷಕಿಯರಾದ ಭವ್ಯಶ್ರೀ ಹಾಗೂ ಚಿತ್ರಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
.jpeg)
.jpeg)
0 Comments