Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪವರ್ ಬ್ರಿಗೇಡ್‌ನ ಮೂರು ದಿನಗಳ ವಸತಿ ಶಿಬಿರ ‘ಕನಸಿನ ರೆಕ್ಕೆ’ಗೆ ಚಾಲನೆ

ಪೆರ್ಲ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ, ನಾಯಕತ್ವ ಗುಣ, ಪರಸ್ಪರ ಸಹಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಹೈಯರ್ ಸೆಕೆಂಡರಿ ವಿಭಾಗದ ಪವರ್ ಬ್ರಿಗೇಡ್‌ನ ಪ್ರಥಮ ಮೂರು ದಿನಗಳ ವಸತಿ ಶಿಬಿರ ‘ಕನಸಿನ ರೆಕ್ಕೆ’ಗೆ ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಾಲನೆ ನೀಡಲಾಯಿತು.

ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೈಯರ್ ಸೆಕೆಂಡರಿ ವಿಭಾಗದ ವೃತ್ತಿ ಮಾರ್ಗದರ್ಶನ ಮತ್ತು ಹದಿಹರೆಯದವರ ಸಮಾಲೋಚನಾ ಘಟಕದ ಆಶ್ರಯದಲ್ಲಿ ಆರಂಭಗೊಂಡ ಪವರ್ ಬ್ರಿಗೇಡ್ ಯೋಜನೆಯ ಅಂಗವಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ ಬಿ. ಉದ್ಘಾಟಿಸಿದರು.

ಶೇಣಿ ಎಯುಪಿ ಶಾಲಾ ಮುಖ್ಯೋಪಾಧ್ಯಾಯ, ಎಣ್ಮಕಜೆ ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಚ್‌ಎಸ್ ಮುಖ್ಯೋಪಾಧ್ಯಾಯಿನಿ ಗೀತಾ ಬಿ.ಆರ್., ಪಿಟಿಎ ಕಾರ್ಯಕಾರಿ ಸಮಿತಿ ಸದಸ್ಯ ವಿಲ್ಸನ್ ಡಿಸೋಜಾ ಹಾಗೂ ಉಪನ್ಯಾಸಕ ದಿಲೀಪ್ ಎ. ಉಪಸ್ಥಿತರಿದ್ದರು.

ಪ್ರಾಂಶುಪಾಲ ಶಾಸ್ತಾ ಕುಮಾರ್ ಎ. ಸ್ವಾಗತಿಸಿ, ಪವರ್ ಬ್ರಿಗೇಡ್ ಸಂಚಾಲಕಿ ವಿಜಯಲಕ್ಷ್ಮಿ ವಿ. ವಂದಿಸಿದರು. ಬಳಿಕ ಸಂತೋಷ್ ಕುಮಾರ್ ಕ್ರಾಸ್ತಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಮೂರು ದಿನಗಳ ಶಿಬಿರವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಒಗ್ಗಟ್ಟು, ಸಹಾನುಭೂತಿ, ನಾಯಕತ್ವ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಆಶಯದೊಂದಿಗೆ ನಡೆಯುತ್ತಿದೆ.


Post a Comment

0 Comments

ಜಾಹೀರಾತು

Responsive Advertisement