ಕಣ್ಣೂರು: ಟರ್ಫ್‌ನಲ್ಲಿ ಫುಟ್‌ಬಾಲ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು 19 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ಕಣ್ಣೂರಿನ ಪಾನೂರಿನಲ್ಲಿ ನಡೆದಿದೆ. ಪಾನೂರು ವಳ್ಳಂಗಾಡ್ ಪೆಟ್ರೋಲ್ ಪಂಪ್ ಸಮೀಪ ನಿವಾಸಿಯಾಗಿರುವ ಪಾನೇಂಟವಿಡ ಶಾಲ್ಮಿನ್ ಸಜೀವ್ (19) ಮೃತಪಟ್ಟ ಯುವಕ.
ಫುಟ್‌ಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಶಾಲ್ಮಿನ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಭಾರತೀಯ ಸೇನಾ ಶಿಬಿರದಿಂದ ಅಗ್ನಿವೀರ್ ವಿಭಾಗಕ್ಕೆ ಆಯ್ಕೆಯಾಗಿದ್ದ ಅಭ್ಯರ್ಥಿಯಾಗಿದ್ದರು ಶಾಲ್ಮಿನ್. ಸಜೀವ್ ಮತ್ತು ಜಿಮಿಷ ದಂಪತಿಯ ಪುತ್ರನಾಗಿರುವ ಇವರಿಗೆ ಶಾನ್ವಿ ಎಂಬ ಸಹೋದರಿ ಇದ್ದಾರೆ.

0 Comments