ಕಾಸರಗೋಡು: ಕೃಷಿ ಉತ್ಪನ್ನಗಳ ಕೊರತೆಯನ್ನು ನೀಗಿಸುವುದರ ಜೊತೆಗೆ ತೆಂಗು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಬೇಕೆಂದು ಸ್ವತಂತ್ರ ರೈತ ಸಂಘದ ಕಾಸರಗೋಡು ನಗರಸಭಾ ಸಮಿತಿ ಒತ್ತಾಯಿಸಿದೆ. ಈ ಕುರಿತು ಸಮಿತಿಯ ವತಿಯಿಂದ ಕೃಷಿ ಭವನ ಅಧಿಕಾರಿಗೆ ವಿವರವಾದ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷ ಸೈನುದ್ದೀನ್ ಪಟ್ಟಿಳವಳಪ್ಪು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಸಿ.ಎ. ಅಬ್ದುಲ್ಲ ಕುಂಞಿ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಹಮ್ಮದ್ ವೆಲ್ಕಂ ಮುಖ್ಯ ಅತಿಥಿಯಾಗಿದ್ದರು. ಸಮಿತಿಯ ಕಾರ್ಯದರ್ಶಿ ಐಡಿಯಲ್ ಮುಹಮ್ಮದ್ ಸ್ವಾಗತಿಸಿದರು. ಉಪಾಧ್ಯಕ್ಷ ಯು.ಕೆ. ಯೂಸುಫ್, ಉಸ್ಮಾನ್ ಪಳ್ಳಿಕ್ಕಾಲ್ ಹಾಗೂ ಅಹಮ್ಮದ್ ಉಪಸ್ಥಿತರಿದ್ದರು.

0 Comments