Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಿದ್ದು ಸಿಕ್ಕಿದ ಚಿನ್ನದ ಬಳೆಯನ್ನು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಕುಂಬ್ಡಾಜೆಯ ಯುವಕ

ಬದಿಯಡ್ಕ: ಕುಂಬ್ಡಾಜೆ ಬೆಳಿಂಜ ಬಸ್ ನಿಲ್ದಾಣದ ಸಮೀಪ ಬಿದ್ದು ಸಿಕ್ಕಿದ ಚಿನ್ನದ ಬಳೆಯನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಯುವಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.

ಕುಂಬ್ಡಾಜೆ  ನಿವಾಸಿ ಹಸೈನಾರ್ ಎಂಬವರಿಗೆ ಬಸ್ ನಿಲ್ದಾಣದ ಸಮೀಪ ಚಿನ್ನದ ಬಳೆಯೊಂದು ಸಿಕ್ಕಿತ್ತು. ಅದರ ವಾರಸುದಾರರ ಬಗ್ಗೆ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅವರು ಬಳೆಯನ್ನು ಬದಿಯಡ್ಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಇದೇ ವೇಳೆ, ಚಿನ್ನದ ಬಳೆ ಕಳೆದುಕೊಂಡಿರುವ ಬಗ್ಗೆ ದೂರು ನೀಡಲು ನಾರಂಪಾಡಿಯ ಸುಹೈಬ್ ಅವರ ಪತ್ನಿ ಮರಿಯಮ್ಮತ್ ಇರ್ಫಾನ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಪರಿಶೀಲನೆಯ ಬಳಿಕ ಬಳೆ ಇರ್ಫಾನ ಅವರದ್ದೇ ಎಂದು ಖಚಿತಪಡಿಸಿಕೊಂಡು, ಠಾಣಾಧಿಕಾರಿ ಟಿ. ಸುನಿಲ್ ಕುಮಾರ್ ಅವರ ಸಮ್ಮುಖದಲ್ಲಿ ಹಸೈನಾರ್ ಅವರನ್ನು ಕರೆಸಿ ಬಳೆಯನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

Post a Comment

0 Comments

ಜಾಹೀರಾತು

Responsive Advertisement