ಪಯ್ಯನ್ನೂರು: ಜೈಲಿನಿಂದ ಬಿಡುಗಡೆಯಾಗಿದ್ದ 51 ವರ್ಷದ ವ್ಯಕ್ತಿಯೊಬ್ಬರು ನಿಗೂಢ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆ. ಕಣ್ಣಪುರಂ ನಿವಾಸಿ ಕೆ. ಮನೋಜ್ ಕುಮಾರ್ (51) ಮೃತ ವ್ಯಕ್ತಿ. ಕೆ.ಕಣ್ಣಪುರಂ ಸೇತುವೆಯ ಸಮೀಪದ ಬಾಡಿಗೆ ಕೊಠಡಿಯಲ್ಲಿ ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಕಳೆದ ತಿಂಗಳ 20ರಂದು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮನೋಜ್ ಕುಮಾರ್ ಹಾಗೂ ಅವರ ಸ್ನೇಹಿತರನ್ನು ಕಣ್ಣಪುರಂ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಕಳೆದ ದಿನವಷ್ಟೇ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಘಟನೆಯಲ್ಲಿ ನಿಗೂಢತೆ ಇರುವುದರಿಂದ ಸಮಗ್ರ ತನಿಖೆ ನಡೆಸಬೇಕೆಂದು ಸಂಬಂಧಿಕರು ಹಾಗೂ ಸ್ನೇಹಿತರು ಆಗ್ರಹಿಸಿದ್ದಾರೆ.

0 Comments