ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲ್ ಕಚೇರಿಯಲ್ಲಿ ಕೆ.ವಿ.ವಿ.ಇ.ಎಸ್.ನ ಯೂನಿಟ್ ರೂವಾರಿ ಹಾಗೂ ಪ್ರಥಮ ಅಧ್ಯಕ್ಷರಾದ ದಿ. ಯನ್ ಕೃಷ್ಣ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಯಿತು.
ಕೆ.ವಿ.ವಿ.ಇ.ಎಸ್.ನ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಹಾಗೂ ಸತ್ಯಶಂಕರ ಭಟ್ ಅವರು ದಿ. ಶ್ರೀ ಕೃಷ್ಣ ಭಟ್ ಅವರೊಂದಿಗಿನ ಒಡನಾಟ ಹಾಗೂ ಸಂಘಟನೆಗೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.
ಬಳಿಕ ಅಗಲಿದ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಯೂನಿಟ್ ನ ಪದಾಧಿಕಾರಿಗಳು ಹಾಗೂ ವ್ಯಾಪಾರಿ ಸದಸ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಯೂನಿಟ್ ನ ಕಾರ್ಯದರ್ಶಿ ರವಿ ನೀರ್ಚಾಲ್ ಅವರು ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಗೋಪಾಲ ಬಿ ಅವರು ಧನ್ಯವಾದ ಸಮರ್ಪಿಸಿದರು.

0 Comments