ಮಂಜೇಶ್ವರ: ಮತ್ತೆ ಸೈಬರ್ ವಂಚನೆ ನಡೆದಿದ್ದು, ಪಾವೂರು ನಿವಾಸಿಯ ಮೊಬೈಲ್ ಫೋನ್ ಹ್ಯಾಕ್ ಮಾಡಿ 36 ಸಾವಿರ ರೂ. ವಂಚಿಸಲಾಗಿದೆ. ಪಾವೂರು ಸೂಪ್ಪಿಗುರಿ ನಿವಾಸಿ ಇಬ್ರಾಹಿಂ ಅವರ ಹಣ ಕಳವಾಗಿದೆ.
13ರಂದು ಮೊಬೈಲ್ ಫೋನ್ ಹ್ಯಾಕ್ ಮಾಡಿ ಪಾವೂರಿನ ಕೇರಳ ಗ್ರಾಮೀಣ ಬ್ಯಾಂಕ್ ಶಾಖೆಯ ಖಾತೆಯಿಂದ ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾಸರಗೋಡು ಸೈಬರ್ ಸೆಲ್‌ಗೆ ದೂರು ನೀಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

0 Comments